ಮುಸ್ಲಿಂ ಮಹಿಳೆ ವಿಚ್ಚೇದನಕ್ಕಾಗಿ ಕುಟುಂಬ ಕೋರ್ಟಿಗೆ ಮಾತ್ರ ಹೋಗಬಹುದು: ಮದ್ರಾಸ್ ಹೈಕೋರ್ಟ್

Prasthutha|

►ಖಾಝಿಗಳು ಮದುವೆ ವಿಚ್ಛೇದನ ಸರ್ಟಿಫಿಕೇಟ್ ನೀಡುವುದು ಊರ್ಜಿತವಲ್ಲ ಎಂದ ಪೀಠ

- Advertisement -


ಚೆನ್ನೈ: ಮುಸ್ಲಿಂ ಮಹಿಳೆಯು ಕೌಲ ಅರ್ಥಾತ್ ಮದುವೆ ವಿಚ್ಛೇದನಕ್ಕೆ ಆರಂಭದ ಹೆಜ್ಜೆ ಇಡುವುದಾದರೆ ಅವರು ಕುಟುಂಬ ಕೋರ್ಟಿಗೆ ಹೋಗಬೇಕೇ ಹೊರತು ಖಾಸಗಿ ವ್ಯವಸ್ಥೆಯಾದ ಶರಿಯತ್ ಸಮಿತಿಗಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.


ಖಾಸಗಿ ವ್ಯವಸ್ಥೆಗಳು ಕೌಲ ಬಗೆಯಲ್ಲಿ ಮದುವೆ ವಿಚ್ಛೇದನ ಸರ್ಟಿಫಿಕೆಟ್ ನೀಡುವಂತಿಲ್ಲ ಎಂದು ಹೇಳಿದೆ.
“ಅವು ನ್ಯಾಯಾಲಯಗಳೂ ಅಲ್ಲ, ಅವರು ವಿವಾದಗಳ ತೀರ್ಪುಗಾರರೂ ಅಲ್ಲ. ಅಂತಹ ವ್ಯವಸ್ಥೆಗಳನ್ನೆಲ್ಲ ಕೋರ್ಟುಗಳು ಮೂಟೆ ಕಟ್ಟಬೇಕಾಗಿದೆ” ಎಂದು ಕೋರ್ಟ್ ಹೇಳಿತು.
ಪುರುಷರು ತಲಾಖ್ ಹೇಳಿ ಹೆಂಡತಿಯಿಂದ ಬಿಡುಗಡೆ ಪಡೆಯುವಂತೆ ಹೆಂಡತಿಯರು ಕೂಡ ಕೌಲ ಕ್ರಮದಲ್ಲಿ ಗಂಡನಿಂದ ಬೇರೆ ಆಗಬಹುದು. ಖಾಸಗಿ ವ್ಯವಸ್ಥೆಗಳು ನೀಡುವ ಕೌಲ ಸರ್ಟಿಫಿಕೆಟ್’ಗಳು ಊರ್ಜಿತವಲ್ಲ ಎಂದು ನ್ಯಾಯಾಲಯ ಹೇಳಿದೆ.

- Advertisement -


ಶರಿಯತ್ ಕೌನ್ಸಿಲ್ ತನ್ನ ಹೆಂಡತಿಗೆ ನೀಡಿದ್ದ ಕೌಲ ಸರ್ಟಿಫಿಕೇಟ್ ರದ್ದು ಮಾಡುವಂತೆ ವ್ಯಕ್ತಿಯೊಬ್ಬರು ಮದರಾಸು ಹೈಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡು ತೌಹೀದ್ ಜಮಾತ್ ಶರಿಯತ್ ಕೌನ್ಸಿಲ್ 2017ರಲ್ಲಿ ನೀಡಿದ್ದ ಕೌಲ ಸರ್ಟಿಫಿಕೇಟ್ ರದ್ದು ಮಾಡಿದ ಜಸ್ಟಿಸ್ ಶರವಣನ್ ಅವರು ಕುಟುಂಬ ಕೋರ್ಟಿಗೆ ಹೋಗುವಂತೆ ಸೂಚಿಸಿದರು.
ಬದರ್ ಸಯೀದ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ 2017ಕ್ಕೆ ಮದರಾಸು ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಖಾಜಿಗಳು ಮದುವೆ ವಿಚ್ಛೇದನ ಸರ್ಟಿಫಿಕೇಟ್ ನೀಡುವುದು ಊರ್ಜಿತವಲ್ಲ ಎಂದು ಹೇಳಿತು.


“1937ರ ಮುಸ್ಲಿಂ ಪರ್ಸನಲ್ ಲಾ ಅಪ್ಲಿಕೇಶನ್ ಕಾಯ್ದೆಯ ಶರಿಯತ್ ಸಮಿತಿಗೆ ಮುಸ್ಲಿಂ ಮಹಿಳೆಯರು ಕೌಲ ಸರ್ಟಿಫಿಕೇಟಿಗೆ ಹೋಗುವುದು ಸರಿಯಲ್ಲ, ಕುಟುಂಬ ಕೋರ್ಟ್ ಅದಕ್ಕೆ ಸರಿಯಾದ ಮಾರ್ಗವಾಗಿದೆ. ಕೆಲವು ಜಮಾತ್ ಸದಸ್ಯರು ತಾವೇ ಹೆಸರಿಸಿಕೊಂಡ ಸಮಿತಿಯು ಕಾನೂನುಬದ್ಧ ನ್ಯಾಯ ತೀರ್ಮಾನ ಮಾಡಲಾಗದು” ಎಂದು ನ್ಯಾಯಾಧೀಶರು ಹೇಳಿದರು.
ಶರಿಯಾ ಕೌನ್ಸಿಲ್ ನೀಡಿದ ಸರ್ಟಿಫಿಕೇಟ್ ರದ್ದು ಪಡಿಸಲಾಗಿದೆ. ದಂಪತಿಯು ತಮಿಳುನಾಡು ಕಾನೂನು ಸೇವಾ ಪ್ರಾಧಿಕಾರಕ್ಕೆ ಇಲ್ಲವೇ ಕುಟುಂಬ ಕೋರ್ಟಿಗೆ ಹೋಗುವಂತೆ ಹೈಕೋರ್ಟ್ ಆದೇಶಿಸಿತು.
2014ರ ವಿಶ್ವ ಮದನ ಲೋಚನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತಿತರರು ಮೊಕದ್ದಮೆಯಲ್ಲಿ ಸುಪ್ರೀ ಕೋರ್ಟ್ ಕೊಟ್ಟ ತೀರ್ಪಿನಲ್ಲಿ, ಮುಸ್ಲಿಂ ಮತ್ತು ಬ್ರಿಟಿಷ್ ಆಡಳಿತ ಕಾಲದಲ್ಲಿದ್ದ ಫತ್ವಾ, ಸ್ವತಂತ್ರ ಭಾರತದ ಸಂವಿಧಾನದಡಿಯಲ್ಲಿ ಅದಕ್ಕೆ ಸ್ಥಾನವಿಲ್ಲ ಎಂದುದನ್ನು ಅರ್ಜಿದಾರರು ಒತ್ತಿ ಹೇಳಿದ್ದರು.
ಮಕ್ಕಾ ಮಸೀದಿಯ ಶರಿಯತ್ ಕೌನ್ಸಿಲ್’ನದೇ ತೀರ್ಮಾನ ನಡೆಯುವುದಾದರೆ ಮದರಾಸು ಹೈಕೋರ್ಟು ಏಕೆ ? ಎಂದೂ ಅರ್ಜಿದಾರರು ಪ್ರಶ್ನಿಸಿದ್ದರು.

Join Whatsapp