ಚಂಚಲ ಮಾರುಕಟ್ಟೆಯೇ ಕಾರಣ ಎಂದ ಅದಾನಿ

Prasthutha|

ಮುಂಬೈ: ನನ್ನ ವ್ಯಾಪಾರ ಸಂಘಟನೆ ತುಂಬ ಬಲವಾಗಿದೆ. ಚಂಚಲ ಮಾರುಕಟ್ಟೆಯ ಕಾಟ ಇದೆ ಅಷ್ಟೆ ಎಂದು ಬಿಲಿಯನೇರ್ ಗೌತಮ ಅದಾನಿ ತನ್ನ ಹೊಸ ಷೇರು ಮಾರಾಟಕ್ಕೆ ಕಾರಣ ನೀಡಿದ್ದಾರೆ.
ಯುಎಸ್’ಎ ಮಾರುಕಟ್ಟೆ ವಿಮರ್ಶೆಯ ಬಳಿಕ ಭಾರೀ ಕುಸಿತ ಕಂಡ ತನ್ನ ಷೇರುಗಳ ಬಗ್ಗೆ ಹೂಡಿಕೆದಾರರಿಗೆ ಅದಾನಿ ತನ್ನ ತೀರ್ಮಾನವನ್ನೂ ಹೇಳಿದ್ದಾರೆ.

- Advertisement -


“ಬಹಳಷ್ಟು ಜನ ಆಶ್ಚರ್ಯಗೊಂಡಿರಬಹುದು; ಮಾರುಕಟ್ಟೆಯ ಚಂಚಲತೆ ನಿನ್ನೆಯದು ಭಾರೀ ಜೋರಿನದು. ಆದ್ದರಿಂದ ಎಫ್’ಪಿಓ- ಸಾರ್ವಜನಿಕ ಕೊಡುಗೆಯನ್ನು ಅನುಸರಿಸುವುದು ನೈತಿಕ ದೃಷ್ಟಿಯಿಂದ ಸರಿಯಾಗದು ಎಂದರು.


“ಉದ್ಯಮಿಯಾಗಿ ಕಳೆದ ನಾಲ್ಕು ದಶಕಗಳಲ್ಲಿ ನಾನು ಷೇರು ಬಂಡವಾಳದಾರರಿಂದ ಹೂಡಿಕೆ ಸಮುದಾಯದವರಿಂದ ಭಾರೀ ಆಶೀರ್ವಾದದ ಬೆಂಬಲವನ್ನೇ ಪಡೆದಿದ್ದೇನೆ. ನಾನು ಉದ್ಯಮಿಯಾಗಿ ಇಲ್ಲಿ ಗಳಿಸಿರುವುದೆಲ್ಲ ಅವರ ಕೃಪಾಶೀರ್ವಾದದ ನಂಬಿಕೆಯಿಂದಲೇ ಆಗಿದೆ. ನನ್ನ ಎಲ್ಲ ಯಶಸ್ಸನ್ನು ನಾನು ಅವರಿಗೆ ಅರ್ಪಿಸುತ್ತೇನೆ. ನನಗೆ ನನ್ನ ಹೂಡಿಕೆದಾರರ ಹಿತವೇ ಮೊದಲು, ಉಳಿದುದೆಲ್ಲ ಎರಡನೆಯದು. ಹಾಗಾಗಿ ಅದನ್ನು ಬಲಪಡಿಸಲು ನಾವು ಎಫ್’ಪಿಓ ಹಿಂದೆಗೆದುಕೊಂಡೆವು” ಎಂದು ಅದಾನಿ ಹೇಳಿದ್ದಾರೆ.

- Advertisement -


ಕಳೆದ ರಾತ್ರಿ ಅದಾನಿ ಎಂಟರ್ ಪ್ರೈಸಸ್ 20,000 ಕೋಟಿ ಎಫ್’ಪಿಓ ಹಿಂದೆಗೆದುಕೊಳ್ಳುವ ತೀರ್ಮಾನ ಮಾಡಿದ್ದು ಅದನ್ನು ಪೂರ್ಣವಾಗಿ ಹೂಡಿಕೆದಾರರಿಗೆ ಹಿಂದಿರುಗಿಸುವುದಾಗಿ ಹೇಳಿದೆ.
ಅದಾನಿ ಗುಂಪು ಕಂಪೆನಿಗಳು 104 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿವೆ. ಅದಾನಿ ಗುಂಪಿನ ವಂಚನೆ ಬಗ್ಗೆ ಅಮೆರಿಕದ ಹಿಂಡನ್ ಬರ್ಗ್ ವರದಿ ಮಾಡಿದ ಬಳಿಕ ಅದರ ಷೇರು ಮೌಲ್ಯ ಜೊತೆಗೆ ಮಾರುಕಟ್ಟೆ ಮೌಲ್ಯವೂ ಕುಸಿದಿದೆ. ಒಟ್ಟಾರೆ ಅದಾನಿ ಕಂಪೆನಿಗಳ ಮೌಲ್ಯ 10% ಕುಸಿದಿದೆ ಎನ್ನಲಾಗಿದೆ.


ನಮ್ಮ ಕಂಪೆನಿಗಳು ಬಂಡವಾಳ ಹೂಡಿಕೆ ಮಾರುಕಟ್ಟೆ ನೀತಿಯನ್ನು ಬದಲಾಯಿಸಿಕೊಂಡು ದೃಢತೆ ಸಾಧಿಸುವುದಾಗಿ ಅದಾನಿ ಹೇಳಿದ್ದಾರೆ.


“ಈ ತೀರ್ಮಾನವು ನಮ್ಮ ಭವಿಷ್ಯದ ಯೋಜನೆ ಮತ್ತು ಈಗಿನ ನಡಾವಳಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಯೋಜನೆಗಳನ್ನು ಕ್ಲಪ್ತ ಕಾಲದಲ್ಲಿ ಮುಂದುವರಿಸುತ್ತೇವೆ. ನಮ್ಮ ಬ್ಯಾಲೆನ್ಸ್ ಶೀಟು ಆರೋಗ್ಯದಾಯಕವಾಗಿದ್ದು ಸಂಪತ್ತು ದೃಢವಾಗಿದೆ. ನಮ್ಮ ಇಬಿಐಡಿಟಿಎ ಮಟ್ಟವು ಗಟ್ಟಿಮುಟ್ಟಾಗಿದ್ದು ನಮ್ಮ ಸಾಲವನ್ನು ಸರಿಯಾಗಿ ನಿಬಾಯಿಸುತ್ತದ್ದೇವೆ. ನಾವು ದೀರ್ಘ ಕಾಲೀನ ಬೆಳವಣಿಗೆಯನ್ನು ಒಳಗಿನಿಂದಲೇ ಬೆಳೆಸಲು ಬದ್ಧರಾಗಿದ್ದೇವೆ.” ಎಂದೂ ಅದಾನಿ ಹೇಳಿದ್ದಾರೆ

Join Whatsapp