ಕೊಯಮತ್ತೂರು ಸಂಗಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಮುಸ್ಲಿಂ ಜಮಾಅತ್ ನಾಯಕರು

Prasthutha|

ಚೆನ್ನೈ: ಕೊಯಮತ್ತೂರಿನ ಉಕ್ಕಾಡಂನಲ್ಲಿರುವ ಶತಮಾನದಷ್ಟು ಹಳೆಯ ಸಂಗಮೇಶ್ವರ ದೇವಸ್ಥಾನಕ್ಕೆ ಕೊಟ್ಟಾಯ್ಮೇಡುವಿನ ಮೂರು ಮಸೀದಿಗಳ ಜಮಾಅತ್ ಮುಖಂಡರು ಗುರುವಾರ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ದೇವಾಲಯದ ಅರ್ಚಕರೊಂದಿಗೆ ಚರ್ಚೆ ನಡೆಸಿದರು.

- Advertisement -

ಈ ದೇಗುಲದ ಬಳಿ ಅಕ್ಟೋಬರ್ 23ರಂದು ಕಾರೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸ್ಫೋಟದ ನಂತರ ಆ ಪ್ರದೇಶದಲ್ಲಿ ಉದ್ವಿಗ್ನತೆ ಆವರಿಸಿತ್ತು

ಉಲೇಮಾಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ದೇವಸ್ಥಾನದ ಆಡಳಿತ ಮಂಡಳಿಯವರು ಶಾಲು ಹೊದಿಸಿ ಸನ್ಮಾನಿಸಿದರು.

- Advertisement -

ನಾವು ಕಳೆದ 200 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ, ಮತ್ತು ಈ ಕೊಟ್ಟೈಮೇಡು ಮಸೀದಿಗಳು, ದೇವಾಲಯಗಳು ಮತ್ತು ಚರ್ಚುಗಳಿಂದ ಸುತ್ತುವರೆದಿದೆ. ನಾವು ಸ್ನೇಹಪರ ರೀತಿಯಲ್ಲಿ ಒಟ್ಟಿಗೆ ವಾಸಿಸುತ್ತೇವೆ ಮತ್ತು ನಮ್ಮೊಂದಿಗೆ ವಿಭಜನೆಯನ್ನು ಸೃಷ್ಟಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ಇಲ್ಲಿ ನಡೆದ ಘಟನೆ ನಿಮಗೆಲ್ಲರಿಗೂ ತಿಳಿದಿದೆ. ಈ ಪ್ರದೇಶದಲ್ಲಿನ ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಸೃಷ್ಟಿಸಲು ನಾವು ನಿರ್ಧರಿಸಿದ್ದೇವೆ. ಇದರೊಂದಿಗೆ ಇಂದು ನಾವು ಸುನ್ನತ್ ಜಮಾತ್ ಗಳ ನಾಯಕರು ಸಂಗಮೇಶ್ವರ ದೇವಾಲಯದ ಅಧಿಕಾರಿಗಳನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೆವು ಎಂದು ಜಮಾಅತ್ ಮುಖಂಡರೊಬ್ಬರು ಹೇಳಿದ್ದಾರೆ.

ಸ್ಫೋಟದಲ್ಲಿ ಭಾಗಿಯಾಗಿರುವ ಜನರು ಯಾವುದೇ ಜಮಾಅತ್ ಗೆ ಸೇರಿದವರಲ್ಲ ಎಂದಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕೊಯಮತ್ತೂರಿನಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಗೊಳಿಸುವುದು ಈ ಭೇಟಿಯ ಉದ್ದೇಶವಾಗಿತ್ತು ಎಂದು ಉಭಯ ಸಮುದಾಯದವರು ಹೇಳಿದ್ದಾರೆ.



Join Whatsapp