ಕವಿ ಮುನವ್ವರ್ ರಾಣಾರ ಹೆಣ್ಮಕ್ಕಳಿಗೆ ಯೋಗಿ ಸರಕಾರದಿಂದ ಗೃಹ ಬಂಧನ

Prasthutha|

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ, ಕವಿ ಮುನವ್ವರ್ ರಾಣಾ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಗೃಹ ಬಂಧನಕ್ಕೊಳಪಡಿಸಲಾಗಿದೆ.

ಸಿಎಎ ವಿರೋಧಿ ಹೋರಾಟಗಾರರಾದ ರಾಣಾರ ಮಕ್ಕಳು ಸುಮಯ್ಯಾ ರಾಣಾ ಮತ್ತು ಉಸ್ಮಾ ಪರ್ವೀನ್ ಸಿಎಂ ಯೋಗಿ ನಿವಾಸದ ಹೊರಗೆ ಪ್ರತಿಭಟನೆಗೆ ಕರೆ ನೀಡಿದ್ದರು. ಮುಖ್ಯಮಂತ್ರಿಯವರಿಗೆ ತಮ್ಮ ಧ್ವನಿ ಕೇಳುವಂತೆ ‘ಚಪ್ಪಾಳೆ’ ತಟ್ಟುವ ಪ್ರತಿಭಟನೆ ನಡೆಸಲು ಅವರು ಸೂಚಿಸಿದ್ದರು.

- Advertisement -

ಹೀಗಾಗಿ, ರಾಣಾ ಅವರ ಮಕ್ಕಳು ವಾಸಿಸುವ ಕೇಸರ್ ಭಾಗ್ ಪ್ರದೇಶದ ಸಿಲ್ವರ್ ಹೈಟ್ಸ್ ಅಪಾರ್ಟ್ ಮೆಂಟ್ ಆವರಣದಲ್ಲಿ ಬೃಹತ್ ಸಂಖ್ಯೆಯ ಪೊಲೀಸರು ಜಮಾವಣೆಗೊಂಡಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ, ಹೆಚ್ಚಿನ ಜನರು ಗುಂಪು ಸೇರಬಾರದು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಡಿಸೆಂಬರ್-ಜನವರಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಇಬ್ಬರು ಸಹೋದರಿಯರೂ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -