ಅಶ್ಲೀಲ ಚಿತ್ರ ನಿರ್ಮಾಣ : ರಾಜ್ ಕುಂದ್ರಾ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಮುಂಬೈ ಕೋರ್ಟ್

Prasthutha|

ಮುಂಬೈ: ಆನ್‌ಲೈನ್ ಮೂಲಕ ಅಶ್ಲೀಯ ವೀಡಿಯೋಗಳನ್ನು ಹಂಚಿಕೊಂಡ ಆರೋಪದಲ್ಲಿ 2020 ರಲ್ಲಿ ದಾಖಲಾಗಿದ್ದ ಎಫ್.ಐ.ಆರ್ ಗೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯವು ಸೋಮವಾರ ತಳ್ಳಿಹಾಕಿದೆ.

- Advertisement -

ಅಶ್ಲೀಲ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ದಾಖಲಾದ ಎಫ್.ಐ.ಆರ್ ಮೂಲಕ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ರಾಜ್ ಕುಂದ್ರಾ ಅವರು ಮ್ಯಾಜಿಸ್ಟ್ರೇಟ್‌ ನ ಆದೇಶವನ್ನು ತಡೆಹಿಡಿಯುವಂತೆ ಬಾಂಬೆ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ನಿರಾಕರಿಸಿದ ನಂತರ ಮುಂಬೈ ನ್ಯಾಯಾಲಯದಿಂದ ಈ ಆದೇಶ ಹೊರಬಿದ್ದಿದೆ.

ರಾಜ್ ಕುಂದ್ರಾ ಅವರ ವಿರುದ್ಧ ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಮಹಿಳೆಯರ ಜೊತೆ ಅಸಭ್ಯ ವರ್ತನೆ ತಡೆ ಕಾಯ್ದೆ ಅಡಿಯಲ್ಲಿ 2020 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಾತ್ರವಲ್ಲ ಈ ಪ್ರಕರಣದಲ್ಲಿ ನಟಿ ಗೆಹನಾ ವಶಿಸ್ಟ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಗೆಹನಾ ಅವರಿಗೆ 2021 ಎಪ್ರಿಲ್ ನಲ್ಲಿ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿತ್ತು.

- Advertisement -

ಕುಂದ್ರಾ ಅವರು ಸೆಷನ್ ನ್ಯಾಯಾಲಯದಲ್ಲಿ ತನ್ನ ಬಂಧನಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.

Join Whatsapp