ಮುಂಬೈ: ಮುಖೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಂಪೆನಿಯ ಆಡಳಿತವನ್ನು ಹಿರಿಯ ಮಗ ಆಕಾಶ್ ಅವರಿಗೆ ಹಸ್ತಾಂತರಿಸಿದ್ದಾರೆ. ಇದು 65 ವಯಸ್ಸಿನ ಬಿಲಿಯಾಧಿಪತಿಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಯೋಜನೆಯ ಮುಂದುವರಿದ ಭಾಗವೆಂದು ತಿಳಿದು ಬಂದಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಕಂಪೆನಿಯ ಮಂಡಳಿಯ ಸಭೆಯು ಜೂನ್ 29 ರಂದು ನಡೆದಿದ್ದು, ಆಡಳಿತ ಮಂಡಳಿಯ ನಿರ್ದೇಶಕಾಗಿ ಆಕಾಶ್ ಎಂ ಅಂಬಾನಿ ಅವರನ್ನು ಕಂಪೆನಿಯ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಪಂಕಜ್ ಮೋಹನ್ ಪವಾರ್ ಅವರನ್ನು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.