ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಆರನೇ ಬ್ಲಾಕ್ ನಲ್ಲಿ ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನೊಬ್ಬನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಇಂದು SJM ಮತ್ತು SMA ರಾಜ್ಯ ಹಾಗೂ ಜಿಲ್ಲಾ ನಾಯಕರು ಕಮಿಷನರಿಗೆ ದೂರು ನೀಡಿದ್ದಾರೆ.
ಆರನೇ ಬ್ಲಾಕ್ ತೌಯಿಬಾ ಮಸೀದಿಯ 6ನೇ ತರಗತಿಯ ವಿದ್ಯಾರ್ಥಿ ಶಯಾನ್ ಎಂಬ ಬಾಲಕ ಮದರಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕೈಯ್ಯಲ್ಲಿ ನೂಲು ಧರಿಸಿ, ಹಣೆಗೆ ನಾಮ ಹಾಕಿದ ಇಬ್ಬರು ಬೈಕ್ ನಲ್ಲಿ ಬಂದು ಬಾಲಕನನ್ನು ಎಳೆದಾಡಿ ಹಲ್ಲೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (SJM) ಇದರ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಮತ್ತು ಸುನ್ನೀ ಅಸೋಶಿಯೇಶನ್ ಮ್ಯಾನೇಜ್ಮೆಂಟ್ (SMA) ಇದರ ಜಿಲ್ಲಾಧ್ಯಕ್ಷ ಎಪಿ ಇಸ್ಮಾಯಿಲ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಸುನ್ನೀ ನಾಯಕರು ಇಂದು ಮಂಗಳೂರು ಕಮಿಷನರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.