ಯು.ಕೆ.ಯಲ್ಲಿ ‘ಮುಹಮ್ಮದ್’ ಅತ್ಯಂತ ಜನಪ್ರಿಯ ಹೆಸರು

Prasthutha|

ಲಂಡನ್: ಮಕ್ಕಳಿಗೆ ನಾಮಕರಣ ಮಾಡುವಾಗ ಯುನೈಟೆಡ್ ಕಿಂಗ್ಡಮ್’ನಲ್ಲಿ ಹೆಚ್ಚಿನ ಪೋಷಕರು “ಮುಹಮ್ಮದ್” ಹೆಸರನ್ನು ಇಡುತ್ತಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

- Advertisement -

ಮಗು ಗಂಡಾದರೆ ಅವರಿಗೆ ‘ಮುಹಮ್ಮದ್’ ಎಂಬ ಹೆಸರು ಇಡಲಾಗುತ್ತಿದೆ. ಇಲ್ಲಿ ಮುಹಮ್ಮದ್ ಅತ್ಯಂತ ಜನಪ್ರಿಯ ಹೆಸರು ಎಂದು ಆನ್’ಲೈನ್ ಮಾಧ್ಯಮ ಸಂಸ್ಥೆ ಬೇಬಿ ಸೆಂಟರ್ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.

ಅಗ್ರ 100 ಪುರುಷರು ಮತ್ತು ಮಹಿಳೆಯರ ಹೆಸರು ಶ್ರೇಯಾಂಕದಲ್ಲಿ ಮುಸ್ಲಿಮ್ ಹೆಸರು ಸುಮಾರು ಶೇಕಡಾ 10 ರಷ್ಟು ಹೊಂದಿದೆ. ಬಾಲಕರ ಹೆಸರುಗಳ ಪೈಕಿ ಮುಹಮ್ಮದ್ ಜೊತೆಗೆ ಅಲಿ 31ನೇ ಸ್ಥಾನ, ಯೂಸುಫ್ 53ನೇ, ಅಯಾನ್ 61ನೇ, ಅಹ್ಮದ್ 63ನೇ, ಉಮರ್ 72ನೇ, ಅಬ್ದುಲ್ 84ನೇ, ಇಬ್ರಾಹಿಮ್ 92ನೇ ಮತ್ತು ಸೈಯದ್ 94ನೇ ಸ್ಥಾನವನ್ನು ಪಡೆದಿದೆ.

- Advertisement -

ಇನ್ನೂ ಬಾಲಕಿಯರ ಹೆಸರುಗಳ ಪೈಕಿ ಲೈಲಾ ಅತ್ಯಂತ ಜನಪ್ರಿಯ ಮುಸ್ಲಿಮ್ ಹೆಸರಾಗಿದ್ದು, 24 ನೇ ಸ್ಥಾನದಲ್ಲಿದೆ. ಅಲ್ಲದೆ ಫಾತಿಮಾ 27ನೇ, ನೂರ್ 29ನೇ, ಮರ್ಯಮ್ 33ನೇ, ಆಯಿಷಾ 37ನೇ, ಆಲಿಯಾ 60ನೇ, ರಾಯಾ 92ನೇ ನೋರಾ 95ನೇ ಮತ್ತು ಅನಯಾ 98ನೇ ಸ್ಥಾನಗಳಲ್ಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಯುಕೆಯಲ್ಲಿನ ಕೆಲವು ಘಟನೆಗಳು ಸಾಮಾನ್ಯ ಹೆಸರುಗಳು ಜನಪ್ರಿಯತೆಯ ಮೇಲೆ ಬಲವಾಗಿ ಪ್ರಭಾವ ಬೀರಿವೆ ಎಂದು ಹೇಳಲಾಗಿದೆ. ಉದಾಹರಣೆಗೆ ಅಮೆರಿಕ ಚಲನಚಿತ್ರ ತಾರೆಯರಾದ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಅಂಬರ್ ಎಂಬ ಹೆಸರು ಶ್ರೇಯಾಂಕದಲ್ಲಿ ತೀವ್ರ ಕುಸಿತ ಕಂಡಿದೆ.

ಈ ಮಧ್ಯೆ 2015 ರಿಂದ ಇದೇ ಮೊದಲ ಬಾರಿಗೆ ಹೊಸ ಹೆಸರುಗಳ ಪಟ್ಟಿಯಲ್ಲಿ ಲಿಲಿ ಒಲಿವಿಯಾ ಅವರನ್ನು ಹಿಂದಿಕ್ಕಿ ಬಾಲಕಿಯರ ಹೆಸರು ಅಗ್ರಸ್ಥಾನದಲ್ಲಿದೆ.



Join Whatsapp