ಮೂಡುಶೆಡ್ಡೆ ಪಂಚಾಯತ್ ವತಿಯಿಂದ ಗ್ರಾಮ ಸ್ವಚ್ಛತಾ ಅಭಿಯಾನ । ನಾಗರಿಕರಿಂದ ಉತ್ತಮ ಸ್ಪಂದನೆ

Prasthutha|

► ವೀಡಿಯೋ ವೀಕ್ಷಿಸಿ

ಮೂಡುಶೆಡ್ಡೆ ಗ್ರಾಮಪಂಚಾಯತ್ ವತಿಯಿಂದ ಎಲ್ಲಾ ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಯಿತು ಈ ಪ್ರಯುಕ್ತ ಮೂಡುಶೆಡ್ಡೆ ಗ್ರಾಮ ಪಂಚಾಯತ್ ನ ಎದುರುಪದವು ಒಂದನೇ ವಾರ್ಡ್ ಎಸ್ಡಿಪಿಐ ಸದಸ್ಯರಾದ ಸಾಜುದ್ದೀನ್ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ಥಳೀಯ ಸಂಘ ಸಂಸ್ಥೆಗಳಾದ ಬಿಸ್ಮಿಲ್ಲಾ ಯಂಗ್ ಮೆನ್ಸ್ ಕಾರ್ಯಕರ್ತರು,  ಎದುರುಪದವು ಒಂದನೇ ವಾರ್ಡ್ ನ ಪಂಚಾಯತ್ ಸದಸ್ಯರಾದ ದೀಪಾ, ಶಾರದ, ಸ್ಥಳೀಯ ಅಂಗವಾಡಿ ಶಿಕ್ಷಕಿ ಸರಸ್ವತಿ, ಬಿಸ್ಮಿಲ್ಲಾ ಯಂಗ್ ಮೆನ್ಸ್ ಅಧ್ಯಕ್ಷ ಆರೀಫ್, ಸೇರಿ ಸ್ವಚ್ಚತಾ ಕಾರ್ಯ ನೆರವೇರಿಸಿದರು.

- Advertisement -

ಈ ವೇಳೆ ಮಾತನಾಡಿದ ಎದುರುಪದವು ವಾರ್ಡ್ ಸದಸ್ಯ ಸಾಜುದ್ದೀನ್ ಮೂಡುಶೆಡ್ಡೆ,  ಪಂಚಾಯತ್ ವ್ಯಾಪ್ತಿಯ ಎಲ್ಲಾ 24 ವಾರ್ಡ್ ಗಳಲ್ಲಿ ಇಂದು ಏಕಕಾಲದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಕರೆ ನೀಡಲಾಗಿದೆ. ನಮ್ಮ ವಾರ್ಡ್ ನ ನಾಗರಿಕರು ಈ ಕರೆಗೆ ಉತ್ತಮ ರೀತಿಯ ಸ್ಪಂದನೆ ನೀಡಿದ್ದಾರೆ. ಮಾತ್ರವಲ್ಲದೆ ವಾರ್ಡ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದ್ದು, ಎಲ್ಲರಿಗೂ ಮೂಡುಶೆಡ್ಡೆ ಗ್ರಾಮಾಪಂಚಾಯತ್  ಮತ್ತು ಸದಸ್ಯರ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ. ಇದರೊಂದಿಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ  ಮುಂದಿನ ದಿನಗಳಲ್ಲಿ ಸಾರ್ವಜನಿಕರು ಇದೇ ರೀತಿ ಸಹಕಾರ ನೀಡಬೇಕೆಂದು ಕೂಡಾ ಅವರು ವಿನಂತಿಸಿದ್ದಾರೆ.

- Advertisement -