ಭ್ರಷ್ಟಾಚಾರದಿಂದಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಬಿಜೆಪಿಯ ಮುಂದೆ ತಲೆ ಬಾಗಬೇಕಾಯಿತು : ರಾಹುಲ್ ಗಾಂಧಿ

Prasthutha|

ಚೆನ್ನೈ: ಎಐಎಡಿಎಂಕೆ ಮುಖಂಡ ಮತ್ತು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪಳನಿಸ್ವಾಮಿಯನ್ನು ಬಿಜೆಪಿ ಬಲೆಗೆ ಬೀಳಿಸಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಭ್ರಷ್ಟಾಚಾರದಿಂದಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಬಿಜೆಪಿಯ ಮುಂದೆ ತಲೆ ಬಾಗಬೇಕಾಯಿತು ಎಂದು ಅವರು ಹೇಳಿದ್ದಾರೆ.

- Advertisement -

ಚೆನ್ನೈನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ರಾಹುಲ್ ಗಾಂಧಿ, ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ತಮಿಳುನಾಡು ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದ್ದಾರೆ, ಮುಖ್ಯಮಂತ್ರಿಯನ್ನು ಅವರ ಕಾಲಿನ ಮೇಲೆ ಬೀಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ಉತ್ತರ ಪ್ರದೇಶದ ಭ್ರಷ್ಟ ನಾಯಕನೊಬ್ಬನನ್ನು ಅಮಿತ್ ಶಾ ತನ್ನ ಕಾಲಿಗೆ ಬೀಳಲು ಒತ್ತಾಯಿಸಿದ್ದರು. ಪಳನಿಸ್ವಾಮಿಯ ಸ್ಥಿತಿಯೂ ಅದೇ ರೀತಿ ಇದೆ ಎಂದು ಅವರು ಹೇಳಿದರು.

ಈ ಬಾರಿ ಸ್ಟಾಲಿನ್ ಅಧಿಕಾರಕ್ಕೆ ಬರಲಿದ್ದಾರೆ. ಮೋದಿ ಸ್ಟಾಲಿನ್‌ರ ಮೇಲೂ ದಾಳಿ ಮಾಡಲಿದ್ದಾರೆ. ಅದನ್ನು ತೊಡೆದುಹಾಕಲು ಬಿಜೆಪಿಯನ್ನು ದೆಹಲಿಯಿಂದಲೇ ಹೊರಹಾಕಬೇಕು. ಇದು ರಾಜಕೀಯ ಪಕ್ಷಗಳ ನಡುವಿನ ಚುನಾವಣೆಯಲ್ಲ. ಇದು ಎಐಎಡಿಎಂಕೆ, ಬಿಜೆಪಿ, ಆರ್‌ಎಸ್‌ಎಸ್ ಮೈತ್ರಿ ಮತ್ತು ತಮಿಳು ಜನರ ನಡುವಿನ ಹೋರಾಟವಾಗಿದೆ ಎಂದು ಅವರು ಹೇಳಿದ್ದಾರೆ.

Join Whatsapp