ಗುಂಡೇಟಿನಿಂದ ಜೀವ ಉಳಿಸಿದ ಮೊಟೊರೋಲ ಫೋನ್!

Prasthutha|

ಬ್ರೆಝಿಲ್; ಮೊಬೈಲ್ ಫೋನ್ ಅತಿಯಾಗಿ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಅದೇ ಮೊಬೈಲ್ ಫೋನ್ ಬ್ರೆಝಿಲ್’ನಲ್ಲಿ ವ್ಯಕ್ತಿಯೋರ್ವನ ಅಮೂಲ್ಯ ಜೀವವನ್ನೇ ಕಾಪಾಡಿದೆ‌. ಬ್ರೆಝಿಲ್ ದೇಶದ ಈಶಾನ್ಯ ಭಾಗದ ಪೆಟ್ರೊಲಿನ ಪುರಸಭೆ ವ್ಯಾಪ್ತಿಯಲ್ಲಿ ದರೋಡೆಗೆ ಯತ್ನಿಸಿದ ತಂಡವೊಂದು, ತಮ್ಮ‌ ಕೃತ್ಯಕ್ಕೆ ಅಡ್ಡಿಪಡಿಸಿದ ಸ್ಥಳೀಯರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ‌ನಡೆಸಿತ್ತು.

- Advertisement -


ಇದೇ ವೇಳೆ ಸ್ಥಳದಲ್ಲಿದ್ದ ಯುವಕನೋರ್ವನ ಮೇಲೆ ಗುಂಡು ಹಾರಿಸಲಾಗಿತ್ತು. ಆದರೆ ಆತನ ಕಿಸೆಯಲ್ಲಿದ್ದ ಮೊಟೊರೊಲಾ G5 ಮೊಬೈಲ್ ಯುವಕನ ಪ್ರಾಣವನ್ನು ರಕ್ಷಿಸಿದೆ. ಯುವಕನನ್ನು ಗುರಿಯಾಗಿಸಿದ ಗುಂಡು ದೇಹವನ್ನು ತಾಗದಂತೆ ಮೊಬೈಲ್ ತಡೆದಿದೆ. 5 ವರ್ಷಗಳಿಂದ ಇದೇ ಮೊಬೈಲ್’ನನ್ನು ಆ ವ್ಯಕ್ತಿ ಬಳಸುತ್ತಿದ್ದರು ಎನ್ನಲಾಗಿದೆ.


ಗುಂಡಿನ ದಾಳಿಯಿಂದ ಮೊಬೈಲ್’ನ ಮೇಲ್ಬಾಗದ ಗಾಜಿಗೆ ಮಾತ್ರ ಹಾನಿಯಾಗಿದ್ದು, ಹಿಂಭಾಗದ ಕೇಸ್’ಗೆ ಏನೂ ಆಗಿಲ್ಲ ಎಂಬುದೇ ವಿಶೇಷ. ಭಯದಿಂದ ಆಸ್ಪತ್ರೆ ಸೇರಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಪೆಡ್ರೋ ಕಾರ್ವೆಲ್ಲೊ, ಗುಂಡಿನಿಂದ ಹಾನಿಯಾದ ಮೊಬೈಲ್’ನ ಚಿತ್ರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.

- Advertisement -

ಇದಕ್ಕೂ ಮೊದಲು ಕೆಲ ವರ್ಷಗಳ ಹಿಂದೆ ತೈವಾನ್’ನಲ್ಲೂ ಸಮಾನಾಂತರ ಘಟನೆ ನಡೆದಿತ್ತು. ಅಂದು ದರೋಡೆಕೋರರು ಹಾರಿಸಿದ ಗುಂಡು ವ್ಯಕ್ತಿಯೋರ್ವನ ಹೃದಯ ಭಾಗಕ್ಕೆ ತಾಗುವುದನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಮೆಗಾ 6.3 ಸ್ಮಾರ್ಟ್’ಫೋನ್ ತಡೆದಿತ್ತು.

Join Whatsapp