ಕಾಂಗ್ರೆಸ್ಸಿಗರಿಗೆ ಭಾರತದಲ್ಲಿ ಅವಕಾಶವಿಲ್ಲ: ಮಾಲೆಂಗಾವ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್

Prasthutha|

ಭೋಪಾಲ್: ಕೋವಿಡ್ 19 ಪೋಸ್ಟರ್ ಗೆ ಸಂಬಂಧಿಸಿದಂತೆ ಭೋಪಾಲ್ ಸಂಸದೆ, ಮಾಲೆಂಗಾವ್ ಸ್ಫೋಟದ ಆರೋಪಿ ಪ್ರಜ್ಞಾಸಿಂಗ್ ಠಾಕೂರ್ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರ ವಿರುದ್ಧ ಹರಿಹಾಯ್ದು, ಕಾಂಗ್ರೆಸ್ಸಿಗರು ಮತ್ತು ದೇಶದ್ರೋಹಿಗಳಿಗೆ ಭಾರತದಲ್ಲಿ ಯಾವುದೇ ಅವಕಾಶವಿಲ್ಲ. ಭಾರತದಲ್ಲಿ ನೈಜ್ಯ ದೇಶಭಕ್ತರಿಗೆ ಮಾತ್ರ ಜೀವಿಸಲು ಅವಕಾಶ ನೀಡುವುದಾಗಿ ಉದ್ರೇಕಕಾರಿಯಾಗಿ ಹೇಳಿಕೆ ನೀಡಿದರು.

- Advertisement -

ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನ ಭೋಪಾಲ್ ದಕ್ಷಿಣ ಕ್ಷೇತ್ರದ ಶಾಸಕ ಪಿ.ಸಿ. ಶರ್ಮಾ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ ಪ್ರಜ್ಞಾಸಿಂಗ್ ಠಾಕೂರ್ ಹಿನ್ನೆಲೆಯಲ್ಲಿ ಶರ್ಮಾ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿದ್ದರು.

“ ನರ್ಮದಾ ಪರಿಕ್ರಮ” (ನರ್ಮದಾ ನದಿ ಪ್ರದಕ್ಷಿಣೆ) ವನ್ನು ನಿರ್ವಹಿಸಿದ ಮಾತ್ರಕ್ಕೆ ಯಾವುದೇ ವ್ಯಕ್ತಿ ಧರ್ಮನಿಷ್ಠರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ ಪ್ರಜ್ಞಾಸಿಂಗ್ ಠಾಕೂರ್, ಪರೋಕ್ಷವಾಗಿ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಕುಟುಕಿದರು. ಮಾತ್ರವಲ್ಲ ನೈಜ್ಯ ಹಿಂದೂಗಳು ಮಾತ್ರ ದೇಶಭಕ್ತರು ಎಂದು ಅವರು ಬಣ್ಣಿಸಿದರು.

- Advertisement -

ಪ್ರಾಣಿಗಳಿಗೆ ಕೂಡ ಭಾವನೆಗಳಿದ್ದು, ಅವುಗಳ ಸಂತತಿಗಳು ಸತ್ತಾಗ ಅಥವಾ ಅನಾರೋಗ್ಯಕ್ಕೀಡಾದಾಗ ಪ್ರಾಣಿಗಳು ಅಳುತ್ತವೆ. ಆದರೆ ಕಾಂಗ್ರೆಸ್ಸಿಗರು ಪ್ರಾಣಿಗಿಂತ ಹೀನರು ಎಂದು ಠಾಕೂರು ಜರಿದರು. ಕಾರಣ ಮೊದಲು ನನ್ನನ್ನು ಸ್ಫೋಟದ ನೆಪದಲ್ಲಿ ಹಿಂಸಿಸಿದರು ಮತ್ತು ಅನಾರೋಗ್ಯಕ್ಕೀಡಾದಾಗ ನನ್ನ ಕಾಣೆಯಾದ ಪೋಸ್ಟರ್ ಗಳನ್ನು ಅಂಟಿಸಿದ್ದರು ಎಂದು ಅವರು ಗದ್ಗರಿತವಾಗಿ ನುಡಿದರು. ದಸರಾ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಕೆಲವು ಹಿಂದೂಗಳೆಂದು ಕರೆಸಿಕೊಳ್ಳುವ ಅಸೂಕ್ಷ್ಮರು ಶಾಸಕರಾಗಲು ಅರ್ಹರಲ್ಲ. ಆದರೆ ಅಂತಹ ಜನರು ಶಾಸಕರಾಗುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Join Whatsapp