ಲಿಫ್ಟ್ ಕೊಡುವುದಾಗಿ ವಂಚಿಸಿ ತಾಯಿ, ಮಗಳ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Prasthutha|

ಉತ್ತರಾಖಂಡ: ಲಿಫ್ಟ್ ನೀಡುವುದಾಗಿ ಹೇಳಿ ತಾಯಿ ಮತ್ತು ಮಗಳ ಮೇಲೆ ಚಲಿಸುವ ಕಾರಿನಲ್ಲೇ ಕಾಮುಕರು ಗ್ಯಾಂಗ್ ರೇಪ್ ಮಾಡಿರುವ ಘಟನೆ ಹರಿದ್ವಾರದ ರೂರ್ಕಿಯಲ್ಲಿ ನಡೆದಿದೆ.

- Advertisement -

ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳನ್ನು ಸೋನು ಎಂಬಾತ ತನ್ನ ಕಾರಿನಲ್ಲಿ ಲಿಫ್ಟ್ ನೀಡುತ್ತೇನೆಂದು ಕರೆದಿದ್ದ.  ನಂತರ ಚಲಿಸುತ್ತಿರುವ ಕಾರಿನಲ್ಲೇ  ಆತ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿದ ನಂತರ ಇಬ್ಬರನ್ನೂ ಕಾಲುವೆಯೊಂದರ ಬಳಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ ವೇಳೆ  ಪೊಲೀಸ್ ಠಾಣೆಗೆ ತಲುಪಿದ ಮಹಿಳೆ ಪೊಲೀಸರಿಗೆ ಈ ಘಟನೆಯ ಬಗ್ಗೆ ವಿವರಿಸಿದ್ದಾಳೆ.  ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂದು ನಿಖರವಾಗಿ ಹೇಳಲು ಮಹಿಳೆಗೆ ಸಾಧ್ಯವಾಗಲಿಲ್ಲ. ಆದರೆ ಅದನ್ನು ಓಡಿಸುವ ವ್ಯಕ್ತಿಯ ಹೆಸರು ಸೋನು ಎಂದು ಗುರುತಿಸಿದ್ದಾರೆ.

- Advertisement -

ಮಹಿಳೆ ಮತ್ತು ಆಕೆಯ ಮಗಳನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕಠಿಣ ಕಾನೂನು ಜಾರಿಗೊಳಿಸಿದರೂ ಅಂತಹ ಅಹಿತಕರ  ಘಟನೆಗಳು ಮರುಕಳಿಸುವುದು ಮಾತ್ರ ನಿಂತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.



Join Whatsapp