ಸಿವಾನ್: “ನಾನು ಯಾವುದೇ ಪಕ್ಷಕ್ಕೆ ಸೇರಿದವಳಲ್ಲ. ಒಂದು ತಿಂಗಳ ನಂತರ ಬಿಹಾರದಾದ್ಯಂತ ಪ್ರವಾಸ ಮಾಡುತ್ತೇನೆ ಮತ್ತು ಅದರ ನಂತರ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದು ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಅವರ ಪತ್ನಿ ಹಿನಾ ಶಹಾಬ್ ತಿಳಿಸಿದ್ದಾರೆ.
ಹಿನಾ ಶಹಾಬ್ ಅವರು ಆರ್ ಜೆಡಿಯಿಂದ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ ನಂತರ, ಪಕ್ಷವನ್ನು ತೊರೆಯುತ್ತಾರೆ ಎಂದು ಜನರು ಊಹಿಸಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಪ್ರಸ್ತುತ ನಾನು ಯಾವುದೇ ಪಕ್ಷಕ್ಕೆ ಸೇರಿದವಳಲ್ಲ ಎಂದು ಹೇಳಿ ಪಕ್ಷವನ್ನು ತೊರೆಯಬಹುದು ಎಂಬ ಊಹಾಪೋಹಗಳಿಗೆ ಭಾನುವಾರ ತೆರೆ ಎಳೆದಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶಹಾಬುದ್ದೀನ್ ಕಳೆದ ವರ್ಷ ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ ಮೃತಪಟ್ಟಿದ್ದರು.