ಮಗನ ಮೇಲೆ ಕ್ರೌರ್ಯವೆಸಗಿದ ತಾಯಿಯ ಬಂಧನ

Prasthutha|

ಇಡುಕ್ಕಿ: ಬಾಲಕನ ಮೈ, ಕೈಕಾಲುಗಳಿಗೆ ಬೆಂಕಿಯಿಂದ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯೊಬ್ಬಳನ್ನು ಇಡುಕ್ಕಿ ಪೊಲೀಸರು ಬಂಧಿಸಿದ್ದಾರೆ.

- Advertisement -


ಲಕ್ಷ್ಮಣವೀಡು ಕಾಲೋನಿಯಲ್ಲಿ ವಾಸಿಸುವ ಏಳು ವರ್ಷದ ಹುಡುಗನ ಮೇಲೆ ಆಕೆಯ ತಾಯಿ ತೋರಿದ ಕ್ರೌರ್ಯದಿಂದ ಮಗುವಿನ ಎರಡೂ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಕಣ್ಣುಗಳಿಗೆ ಖಾರದ ಪುಡಿ ಹಚ್ಚಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.


ಈ ಹಿಂದೆ ತನ್ನ ತಾಯಿ ತನಗೆ ಹಲವಾರು ಬಾರಿ ಕಿರುಕುಳ ನೀಡಿದ್ದಾಳೆ. ಹತ್ತಿರದ ಮನೆಯಿಂದ ಟೈರ್ ತೆಗೆದುಕೊಂಡಿದ್ದಕ್ಕಾಗಿ ತಾಯಿ ತನಗೆ ಶಿಕ್ಷೆ ವಿಧಿಸಿದ್ದಾರೆ ಎಂದು ಬಾಲಕ ಹೇಳಿದ್ದಾನೆ. ಕೈ ಮತ್ತು ಕಾಲುಗಳಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಏಳು ವರ್ಷದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

- Advertisement -


ಮಗನ ತುಂಟತನ ಸಹಿಸಲು ಸಾಧ್ಯವಾಗದ ಕಾರಣ ಈ ರೀತಿ ಮಾಡಿದ್ದೇನೆ ಎಂದು ಬಾಲಕನ ತಾಯಿ ಹೇಳಿದ್ದಾಳೆ.


ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಹೊರಬಂದ ನಂತರ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗುವುದು.


ಘಟನೆಯ ಬಗ್ಗೆ ತಿಳಿದ ನೆರೆಹೊರೆಯವರು ಪಂಚಾಯತ್ ಸದಸ್ಯ ಮತ್ತು ಅಂಗನವಾಡಿ ಶಿಕ್ಷಕರಿಗೆ ಮಾಹಿತಿ ನೀಡಿದಾಗ ಕ್ರೌರ್ಯದ ವಿವರಗಳು ಬೆಳಕಿಗೆ ಬಂದಿವೆ. ಪೊಲೀಸರು ಮಗುವಿನ ಹೇಳಿಕೆಯನ್ನು ದಾಖಲಿಸಿದ್ದಾರೆ.