ವಿಕ್ಟೋರಿಯಾ ಗೌರಿ ನೇಮಕದ ದೂರು ಕೊಲಿಜಿಯಂ ಗಮನಕ್ಕೆ ಬಂದಿದೆ, ನಾಳೆ ಅರ್ಜಿಯ ವಿಚಾರಣೆ: ಸಿಜೆಐ

Prasthutha|

ನವದೆಹಲಿ: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆ ಆಗಲು ಶಿಫಾರಸುಗೊಂಡ ವಿಕ್ಟೋರಿಯಾ ಗೌರಿ ಬಗ್ಗೆ ಬಂದಿರುವ ದೂರುಗಳನ್ನು ಸುಪ್ರೀಂ ಕೊಲಿಜಿಯಂ ಗಮನಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸೋಮವಾರ ಹೇಳಿದರು.

- Advertisement -


ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ವಿಕ್ಟೋರಿಯಾ ಮೇರಿ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನರ ವಿರುದ್ಧ ದ್ವೇಷ ಭಾಷಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ ಎಂದು ಮದ್ರಾಸು ಹೈಕೋರ್ಟಿನ ಬಾರ್ ಎಸೋಸಿಯೇಶನ್ ನವರು ಗೌರಿ ಶಿಫಾರಸನ್ನು ಹಿಂದಕ್ಕೆ ಪಡೆಯುವಂತೆ ಸಿಜೆಐ ಅವರಿಗೆ ಮನವಿ ಮಾಡಿದ್ದರು.


ಗೌರಿಯವರನ್ನು ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ನೇಮಿಸುವುದರ ವಿರುದ್ಧ ಹಿರಿಯ ವಕೀಲ ರಾಜು ರಾಮಚಂದ್ರನ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣಾ ಪಟ್ಟಿಗೆ ಅವರು ಕೇಳಿದಾಗ ಸಿಜೆಐ ಮೇಲಿನಂತೆ ಹೇಳಿದರು.

- Advertisement -


“ಕೆಲವು ಬೆಳವಣಿಗೆಗಳು ಕೊಲೀಜಿಯಂ ಹೆಸರು ಶಿಫಾರಸು ಆದ ಮೇಲೆ ನಡೆದಿವೆ. ಅದೇ ರೀತಿ ಕೆಲವು ಈ ಸಂಬಂಧಿತ ವಿಚಾರಗಳನ್ನು ನಮ್ಮ ಗಮನಕ್ಕೆ ತರಲಾಗಿದೆ. ಮದ್ರಾಸ್ ಹೈಕೋರ್ಟಿಗೆ ಗೌರಿಯವರ ನೇಮಕದ ವಿಷಯದಲ್ಲಿ ಅಪಸ್ವರ ಎದ್ದಿರುವುದು ಸ್ಪಷ್ಟವಾಗಿ ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ನಾಳೆ ಬೆಳಿಗ್ಗೆ ನಾವು ಈ ಬಗೆಗಿನ ರಿಟ್ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಹಾಕುತ್ತೇವೆ. ನಾವು ಇದರ ವಿಚಾರಣೆಗೆ ಒಂದು ಬೆಂಚ್ ರಚಿಸುತ್ತೇವೆ. ಅದು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ” ಎಂದು ಸಿಜೆಐ ಅವರು ವಕೀಲ ರಾಮಚಂದ್ರನ್ ರಿಗೆ ತಿಳಿಸಿದರು.


ಇದರ ವಿಚಾರಣೆ ಶುಕ್ರವಾರ ನಡೆಯುತ್ತದೆ ಎಂದು ರಾಮಚಂದ್ರನ್ ಪ್ರಕಟಿಸಿದರು; ಇದೇ ಸಂದರ್ಭದಲ್ಲಿ ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜೆಜು ಅವರು ಗೌರಿ ಮತ್ತು ಕೆಲವರು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳಾಗಿ ನೇಮಕಗೊಂಡಿದ್ದಾರೆ ಎಂದು ಹೇಳಿದ್ದಾರೆ.


ಈ ಬೆಳವಣಿಗೆ ಆಗುತ್ತಲೇ ಹಿರಿಯ ವಕೀಲರು ಮತ್ತೆ ಮಧ್ಯಾಹ್ನ 3 ಗಂಟೆಗೆ ಸುಕೋರ್ಟ್’ಗೆ ಮೊರೆ ಹೋಗಿದ್ದಾರೆ. ನ್ಯಾಯಾಧೀಶರ ನೇಮಕ ರಾಷ್ಟ್ರಪತಿಗಳಿಂದ ಆಗುತ್ತದೆ. ರಾಷ್ಟ್ರಪತಿಗಳು ಯೋಗ್ಯತೆ ಪಟ್ಟಿ ತರಿಸಿಕೊಂಡು ನೇಮಕ ಮಾಡುತ್ತಾರೆ.


ಈ ಪ್ರಕರಣದಲ್ಲಿ ಗೌರಿ ಬಗ್ಗೆ ದೂರು ಮತ್ತು ಅದರ ಬಗ್ಗೆ ಸುಪ್ರೀಂನಲ್ಲಿ ಅರ್ಜಿ, ಅಲ್ಲದೆ ಅದನ್ನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಕೊಲಿಜಿಯಂ ಹೇಳಿದ ಹೊತ್ತಿನಲ್ಲಿ ರಾಷ್ಟ್ರಪತಿ ನೇಮಕ ಮಾಡಿದ್ದು ಹೇಗೆ? ರಿಜಿಜು ಆತುರವೇ? ಎಂದು ರಾಮಚಂದ್ರನ್ ಅವರು ಮತ್ತೆ ಸುಪ್ರೀಂ ಮೊರೆ ಹೋಗಿದ್ದಾರೆ.

ವಕೀಲರುಗಳಾದ ಅನ್ನಾ ಮ್ಯಾಥ್ಯೂ, ಸುಧಾ ರಾಮಲಿಂಗಂ, ಡಿ. ನಾಗೇಶ್ ಅವರು ಅರ್ಜಿ ಸಲ್ಲಿಸಿ ಸಂವಿಧಾನದ 217ನೇ ವಿಧಿಯಂತೆ ಗೌರಿಯವರ ಸರಿಯಾದ ಹಿನ್ನೆಲೆ ತಿಳಿಯದೆ ನೇಮಕ ಮಾಡುವುದು ಅಸಾಂವಿಧಾನಿಕ ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ.


ಗೌರಿಯವರು ಅಲ್ಪಸಂಖ್ಯಾತರ ಬಗ್ಗೆ ಪೂರ್ವಗ್ರಹ ಪೀಡಿತೆ ಆಗಿರುವುದರಿಂದ ಅವರು ನೇಮಕರಾಗುವುದನ್ನು ಅನರ್ಹಗೊಳಿಸಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ.


“ಒಬ್ಬ ವ್ಯಕ್ತಿಯು ಕೆಲವು ವರ್ಗಗಳ ಮೇಲೆ ಧರ್ಮಾಧಾರಿತವಾಗಿ ತಪ್ಪು ಮನೋಭಾವವನ್ನು ಹೊಂದಿರುವಾಗ ಅವರು ನ್ಯಾಯಯುತವಾದ ತೀರ್ಪು ನೀಡುವುದು ಸಾಧ್ಯವಿಲ್ಲ. ಸಂವಿಧಾನದ ಮೂಲಭೂತ ಆಶಯವೇ ತಾರತಮ್ಯ ರಹಿತ ನ್ಯಾಯದಾನ” ಎಂದು ಅರ್ಜಿದಾದರು ರಿಟ್ ನಲ್ಲಿ ವಾದಿಸಿದ್ದಾರೆ.