ಚಕ್ರತೀರ್ಥನ ವಕ್ರತನದ ಮತ್ತಷ್ಟು ಮುಖಗಳು ಅನಾವರಣ: ಗೌರಿ ಗೋರಿಗೆ ಅವಮಾನ, ಸಂವಿಧಾನ ಜನಕನಿಗೆ ಕುಹಕ

Prasthutha: June 1, 2022

►ಸ್ತ್ರೀ ಲೋಲುಪತೆಯ ಫೇಸ್ ಬುಕ್ ಪೋಸ್ಟ್ ಕೆದಕಿದ ನೆಟ್ಟಿಗರು

ಬೆಂಗಳೂರು: ಬಿಜೆಪಿ ಸರಕಾರ ನೇಮಕಾತಿ ಮಾಡಿದ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಕ್ರ ಮನಸ್ಥಿತಿಯನ್ನು ನೆಟ್ಟಿಗರು ಅವರ ಹಳೇ ಪೋಸ್ಟ್ ಕೆದಕುವ ಮೂಲಕ ಬಟಾಬಯಲು ಮಾಡಿದ್ದಾರೆ.

ಕಿಡಿಗೇಡಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ನಿಂದಿಸಿದ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ವ್ಯಂಗ್ಯ ಮಾಡಿದ ಮತ್ತು ಸ್ತ್ರೀಯರ ಬಗ್ಗೆ ಅಶ್ಲೀಲ ಮನೋಸ್ಥಿತಿ ಹೊಂದಿರುವ ಚಕ್ರತೀರ್ಥರ  ಪೋಸ್ಟ್ ಗಳನ್ನೆಲ್ಲಾ ನೆಟ್ಟಿಗರು ಬಿಚ್ಚಿಡುತ್ತಿದ್ದು ನಾಗರಿಕ ಸಮಾಜ ಬಹಿಷ್ಕರಿಸಬೇಕಾದ ಮನಸ್ಥಿತಿ ಇರುವ ವ್ಯಕ್ತಿಯೊಬ್ಬ ಮಕ್ಕಳ ಪಠ್ಯ ಪರಿಷ್ಕರಣೆ ಸಮಿತಿ ನೇತೃತ್ವ ವಹಿಸಲು ಅನರ್ಹನು ಎಂದಿದ್ದಾರೆ.

ಗೌರಿ ಗೋರಿಗೆ ಅವಮಾನ: ಆರ್ ಎಸ್ ಎಸ್ ಪರವಾಗಿ ಬ್ಯಾಟಿಂಗ್ ಮಾಡುವ ಬರದಲ್ಲಿ “ಗೌರಿ ಬೀಜಕ್ಕೆ ಬಂದಿರೋ ಮೊಳಕೆಯನ್ನು ಕಿತ್ತುಹಾಕಿ” ಎಂಬರ್ಥದಲ್ಲಿ ಕನಿಷ್ಠ ಭಾಷೆಯನ್ನು ಬಳಸಿ ಸತ್ತ ಮೇಲೂ ಕರ್ನಾಟಕದ ಖ್ಯಾತ ಪತ್ರಕರ್ತೆಗೆ ಅವಮಾನ ಮಾಡಿದ್ದಾರೆ.

ಸಂವಿಧಾನ ಜನಕನಿಗೆ ಕುಹಕ: ಅಂಬೇಡ್ಕರ್ ವಾದಿಗಳನ್ನು ಎಲ್ಲದಕ್ಕೂ ಅಂಬೇಡ್ಕರ್ ಸಿದ್ದಾಂತವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಟೀಕಿಸಿದ ಚಕ್ರತೀರ್ಥ ಈ ಬಗ್ಗೆ ಪೋಸ್ಟ್ ಮಾಡಿ ಅಂಬೇಡ್ಕರ್ ಬೆಂಕಿ ಚಕ್ರ ಕಂಡುಹಿಡಿದ ಆದಿಮಾನವ ಎಂದು ಸಂವಿಧಾನ ಶಿಲ್ಪಿ ಬಗ್ಗೆ ಕುಹಕವಾಡಿದ್ದಾರೆ.

ಸ್ತ್ರೀ ಲೋಲುಪತೆ: ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ, ನೆರೆಹೊರೆಯ ಸ್ತ್ರೀ ಸಂಬಂಧಿತವಾಗಿ ಹಾಕಿದ ಪೋಸ್ಟೊಂದು ನಿಜಕ್ಕೂ ಅಸಹ್ಯ ಮೂಡಿಸುವಂತದ್ದಾಗಿದ್ದು ಚಕ್ರತೀರ್ಥರ ಬಗ್ಗೆ ನಾಗರಿಕ ಸಮಾಜ ಕೀಳರಿಮೆ ಮೂಡಿಸುವಂತಾಗಿದೆ.

ಒಟ್ಟಿನಲ್ಲಿ ರಾಜ್ಯಾದ್ಯಂತ ತೀವ್ರವಾದ ವಿರೋಧ ಕೇಳಿ ಬರುತ್ತಿದ್ದರೂ ನೈತಿಕತೆಯ ರುಮಾಲು ಹೊದಿಸಿ ಅಧ್ಯಕ್ಷಗಿರಿ ನೀಡಿದ ಇಲಾಖೆಗಂತೂ ರೋಹಿತ್ ಚಕ್ರತೀರ್ಥರ ವಿಷಯದಲ್ಲಿ ದಿನೇದಿನೇ ತಲೆ ನೋವು ಹೆಚ್ಚಾಗುತ್ತಿದ್ದು ನಮ್ಮ ಕ್ರಮವೇ ತಪ್ಪು ಎಂಬಂತಾಗಿಬಿಟ್ಟಿದೆ. ರೋಹಿತ್ ಅವರ  ಚಿಂತನೆಗೆ ಪಕ್ವತೆಯಿಲ್ಲ ಎಂದು ಅವರದೇ ಪೋಸ್ಟ್ ಗಳ ಆಧಾರದ ಮೇಲೆ ನೆಟ್ಟಿಗರು ಸಾಬೀತು ಪಡಿಸುತ್ತಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!