ಮಂಗಳೂರು : ಪಳ್ಳಿಯಬ್ಬ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಐದನೇ ಆರೋಪಿಗೆ ಹೈಕೋರ್ಟ್ ಜಾಮೀನು

Prasthutha|

ಮಂಗಳೂರು: ಪಳ್ಳಿಯಬ್ಬ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಐದನೇ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದೆ.

- Advertisement -

ಪಾವೂರು ಗ್ರಾಮದ ಮಲಾರ್ ಅರಸ್ತಾನ ನಿವಾಸಿ ಪಳ್ಳಿಯಬ್ಬ ಯಾನೆ ಪಳ್ಳಿಯಾಕ(75) ಕೊಲೆ ಪ್ರಕರಣದ ಐವರು ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

- Advertisement -

ಇದರ ವಿರುದ್ಧ ಅಥಾವುಲ್ಲ ಯಾನೆ ಅಲ್ತಾಫ್ ಎಂಬವರು ಹೈಕೋರ್ಟ್ ಗೆ ಹೋಗಿ ಜಾಮೀನು ಪಡೆದಿರುತ್ತಾರೆ.

ಪಳ್ಳಿಯಬ್ಬರನ್ನು ಕೊಲೆಗೈದು ಹೂತಿಟ್ಟ ಪ್ರಕರಣಕ್ಕೆ ವಿಚಾರಣೆ ಪೂರ್ಣಗೊಳಿಸಿದ್ದ ಮಂಗಳೂರಿನ ಜಿಲ್ಲಾ ನ್ಯಾಯಾಲಯ, ಐವರು ಆರೋಪಿಗಳು ದೋಷಿಗಳೆಂದು ಮಾರ್ಚ್ 1ರಂದು ತೀರ್ಮಾನಿಸಿತ್ತು.

ಇದೀಗ ಹೈ ಕೊರ್ಟ್ ದ್ವಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸೊಮಶೇಖರ್ ಮತ್ತು ರಾಜೇಶ್ ರೈ ಐದನೇ ಆರೋಪಿಯಾದ ಅಥಾವುಲ್ಲಾ ಯಾನೆ ಅಲ್ತಾಫ್ ಗೆ ಜೂನ್ 23 ರಂದು ಜಾಮೀನು ನೀಡಿದೆ. ಆರೋಪಿ ಪರ ಹೈಕೋರ್ಟ್ ನ್ಯಾಯವಾದಿಗಳಾದ ಲತೀಫ್ ಬಿ. ವಾದಿಸಿದ್ದು, ಜೀಶಾನ್ ಅಲಿ ಸುರತ್ಕಲ್ ಸಹಕರಿಸಿದ್ದರು.