ಉಗ್ರರ ದಾಳಿಯ ಹೆಸರಿನಲ್ಲಿ ಸಹಾನುಭೂತಿಯ ಮತ ಗಳಿಸಲು ಮೋದಿ ಯತ್ನ: ಖರ್ಗೆ ಟೀಕೆ

Prasthutha|

ಅಹ್ಮದಾಬಾದ್: ಉಗ್ರರ ದಾಳಿ ಎಂದು ಸುಳ್ಳು ಹೇಳುತ್ತಲೇ ಗುಜರಾತಿನಲ್ಲಿ ಜನರ ಬೆಂಬಲ ಮತ್ತು ಸಹಾನುಭೂತಿಯ ಮತ ಗಳಿಸಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ. ಮೋದಿಯವರು ಸುಳ್ಳುಗಾರರ ನಾಯಕ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

- Advertisement -

ಗುಜರಾತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

 ಸೋಮವಾರ ಬಿಜೆಪಿಯ ಮಾಜಿ ಸಚಿವ ಜಯ್ ನಾರಾಯಣ್ ವ್ಯಾಸ್ ಅವರು ಈ ಸಂದರ್ಭದಲ್ಲಿ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಈ ತಿಂಗಳ ಆರಂಭದಲ್ಲಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. 75ರ ಹರೆಯದ ವ್ಯಾಸ್ ಅವರನ್ನು ಅಹ್ಮದಾಬಾದಿನ ಸಭೆಯಲ್ಲಿ ಖರ್ಗೆಯವರಲ್ಲದೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೊದಲಾದವರು ಪಕ್ಷಕ್ಕೆ ಬರಮಾಡಿಕೊಂಡರು.

- Advertisement -

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಜಯ್ ನಾರಾಯಣ್ ವ್ಯಾಸ್ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ಬಿಜೆಪಿಯು ಚುನಾವಣಾ ಕಾಲದಲ್ಲಿ ಬೇರೆ ಯಾವುದೇ ಪಕ್ಷಕ್ಕಿಂತ ಹೆಚ್ಚು ಜಾಥಾಗಳನ್ನು ಗುಜರಾತಿನ ಎಲ್ಲ ಭಾಗಗಳಲ್ಲಿ ನಡೆಸಿದೆ. ಪಾಲಿಟಾನ, ಭಾವನಗರ, ಅಂಜಾರ್, ಕಚ್ ಗಳಲ್ಲಿ ಪ್ರಧಾನಿ ಮೋದಿ, ಅಹ್ಮದಾಬಾದ್, ಖರೇಲು, ಸಾವ್ಳಿ, ಭಿಲೋಡಗಳಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಬಚೌಲಿಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗಾಂಧಿ ನಗರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಂದು ನಾನಾ ನಾಯಕರು ರಾಜ್ಯದೆಲ್ಲೆಡೆ ಮೆರವಣೆಗೆ ಮಾಡಿದ್ದಾರೆ.

ಕಾಂಗ್ರೆಸ್, ಎಎಪಿ ಮೊದಲಾದ ಪಕ್ಷಗಳು ಗುಜರಾತಿನಲ್ಲಿ ಉಗ್ರ ಕೃತ್ಯ ನಡೆಸಲು ಬಂದಿವೆ. ಅವರ ಬಗ್ಗೆ ಎಚ್ಚರದಿಂದಿರುವಂತೆ ಮೋದಿಯವರು ಭಾಷಣ ಮಾಡಿರುವುದನ್ನು ಕೆಲವರು ಖಂಡಿಸಿದ್ದಾರೆ. ಗುಜರಾತಿಗಳು ಈ ಉಗ್ರ ಬೆಂಬಲಿಗರ ಬಗ್ಗೆ ಎಚ್ಚರ ವಹಿಸಬೇಕು ಎಂದು ಕಾಂಗ್ರೆಸ್ಸನ್ನು ಟೀಕಿಸಿದ್ದಾರೆ. ಎಎಪಿಯವರು ನರ್ಮದಾ ಅಣೆಕಟ್ಟು ವಿರೋಧಿಸಿದ್ದವರಿಗೆ ಟಿಕೆಟ್ ನೀಡಿದ್ದಾರೆ ಎಚ್ಚರವಿರಲಿ ಎಂದೂ ಮೋದಿಯವರು ಟೀಕಿಸಿದ್ದಾರೆ.

Join Whatsapp