ವೆಟಿಕಾಂ ಸಿಟಿ: ಪ್ರಧಾನಿ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಸಭೆಯನ್ನು ಕೇವಲ 20 ನಿಮಿಷಗಳ ಕಾಲಕ್ಕಾಗಿ ನಿಗದಿಪಡಿಸಲಾಗಿದ್ದು, ಆದರೆ ಒಂದು ಗಂಟೆ ಕಾಲ ನಡೆದಿದೆ. ಈ ಮೂಲಕ ರಾಜಕೀಯ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನಿ ಅವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಕೂಡ ಇದ್ದರು.