ತ್ರಿಪುರಾ ಮುಸ್ಲಿಮರ ಮೇಲೆ ಹಿಂಸಾಚಾರ | ಪಿಎಫ್ ಐ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ

Prasthutha|

ಮಡಿಕೇರಿ: ತ್ರಿಪುರಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲೆ ದೌರ್ಜನ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಹಿಂಸಾಚಾರ ನಿಲ್ಲಿಸಿ, ಅಪರಾಧಿಗಳನ್ನು ಬಂಧಿಸಿ ಘೋಷಣೆಗಳೊಂದಿಗೆ ನಗರದ ಇಂದಿರಾಗಾಂಧಿ ವೃತ್ತದ ಬಳಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿತು.

- Advertisement -

ಸರಕಾರಿ ಪ್ರೇರಿತವಾಗಿ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಈ ಸಂದರ್ಭ ಆರೋಪಿಸಿದರು. ತ್ರಿಪುರಾದ ಮುಸಲ್ಮಾನರನ್ನು ರಕ್ಷಿಸಿ, ಹಿಂಸಾಚಾರ ನಡೆಸಿದವರನ್ನು ಈ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಪಿಎಫ್ ಐ ಮುಖಂಡರಾದ ಅಮೀನ್ ಮೊಹಿಸಿನ್, ಅಬ್ದುಲ್ ಅಡ್ಕಾರ್, ನೂರುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp