ಜಿಯೋಫೋನ್ ನೆಕ್ಸ್ಟ್ ಬೆಲೆ ರು.6,499. ಸ್ಮಾರ್ಟ್’ಪೋನ್ ಕ್ಷೇತ್ರದಲ್ಲಿ ಕ್ರಾಂತಿ ನಿರೀಕ್ಷೆ..!

Prasthutha|

ಹೊಸದಿಲ್ಲಿ: ಬಹು ನಿರೀಕ್ಷಿತ ಜಿಯೋ ಜಿಯೋಫೋನ್ ನೆಕ್ಸ್ಟ್ ಬೆಲೆ ಕೊನೆಗೂ ಬಹಿರಂಗಗೊಂಡಿದ್ದು, ಹಲವಾರು ಫೀಚರ್ಸ್’ಗಳನ್ನು ಒಳಗೊಂಡ ಈ ಸ್ಮಾರ್ಟ್’ಪೋನ್ ಬೆಲೆಯನ್ನು ಜಿಯೋ 6.499 ರುಪಾಯಿಗೆ ನಿಗದಿಪಡಿಸಿದೆ. ದೀಪಾವಳಿ ವೇಳೆ ಗ್ರಾಹಕರಿಗೆ ಫೋನ್ ಲಭ್ಯವಾಗಲಿದ್ದು, 1,999 ರುಪಾಯಿ ಮಾತ್ರ ಪಾವತಿಸಿಯೂ ಗ್ರಾಹಕರು ಜಿಯೋಫೋನ್ ನೆಕ್ಸ್ಟ್ ಖರೀದಿಸಬಹುದಾಗಿದೆ. ಉಳಿದ ಮೊತ್ತವನ್ನು 18 ತಿಂಗಳ ಅಥವಾ 24 ತಿಂಗಳ ಕಂತುಗಳ ಮೂಲಕ ಪಾವತಿಸಬಹುದು ಎಂದು ಕಂಪನಿ ಹೇಳಿದೆ.

- Advertisement -


ಜಿಯೋ, ಗೂಗಲ್ ಜೊತೆಗೂಡಿ ಜಿಯೋಫೋನ್ ನೆಕ್ಸ್ಟ್ ಅನ್ನುವಿನ್ಯಾಸಗೊಳಿಸಿದೆ. 2 ಜಿಬಿ ರಾಮ್, 32 ಜಿಬಿ ಇಂಟರ್ನಲ್ ಮೆಮೊರಿ ಫೋನ್’ನಲ್ಲಿ ಇರಲಿದ್ದು, 512 ಜಿಬಿವರೆಗೂ ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. ಕ್ವಾಲ್’ಕಾಂ ಸ್ಯ್ನ್ಯಾಪ್’ಡ್ರಾಗನ್ ಪ್ರೊಸೆಸರ್ ಹೊಂದಿರುವ ಈ ಫೋನ್’ನ ಡಿಸ್ಲ್ಪೆ 5.45 ಇಂಚಿನದ್ದಾಗಿರಲಿದೆ. ಹಿಂಬದಿ ಕ್ಯಾಮೆರಾ 13 MP ಹಾಗೂ ಫ್ರಟಂಟ್ ಕ್ಯಾಮೆರಾ 8MPಯದ್ದಾಗಿರಲಿದೆ. 3,500MAHA ಸಾಮರ್ಥ್ಯದ ಬ್ಯಾಟರಿಯೂ ಫೋನ್ ಜೊತೆಗಿರಲಿದೆ. ಇಂಗ್ಲೀಷ್ ಸೇರಿದಂತೆ 10 ಭಾಷೆಗಳಲ್ಲಿ ಸಂವಹನ ಸಾಧ್ಯವಾಗುವಂತೆ ಫೋನ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.


ಜಿಯೋಫೋನ್ ನೆಕ್ಸ್ಟ್ ಖರೀದಿಸಲು ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್ ಅಥವಾ jio.com/nextವೆಬ್’ಸೈಟ್’ಗೆ ಭೇಟಿ ನೀಡಿ ಗ್ರಾಹಕರು ಹೆಸರು ನೊಂದಾಯಿಸಬಹುದು ಅಥವಾ 7018270182 ಸಂಖ್ಯೆಗೆ ವಾಟ್ಸಾಪ್’ನಲ್ಲಿ HI ಎಂದು ಟೈಪ್ ಮಾಡಿ ಕಳುಹಿಸುವ ಮೂಲಕವೂ ನೊಂದಾಯಿಸಬಹುದು. ಕಂಪನಿಯ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾದ ಬಳಿಕ ಹತ್ತಿರದ ಜಿಯೋಮಾರ್ಟ್ ರಿಟೇಲ್ ಮಳಿಗೆಯಲ್ಲಿ ಫೋನ್ ಪಡೆದುಕೊಳ್ಳಬಹುದು.

Join Whatsapp