ಭಾರತ ಬಡವಾಗಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ: ಕಾಂಗ್ರೆಸ್

Prasthutha|

ಬೆಂಗಳೂರು: ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ. ಬಡವಾದ ಭಾರತವನ್ನ ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ! ಜನತೆ ಬಡವರಾಗಿರುವುದಷ್ಟೇ ಅಲ್ಲ, ಸರ್ಕಾರದ ಖಜಾನೆಯೂ ಖಾಲಿ, ಆದರೆ ಉದ್ಯಮಿಗಳು ಹೇಗೆ ಬೆಳೆದರು ಎಂದು ಜನತೆ ಯೋಚಿಸಿದರೆ ಮೋದಿಯವರ ಆಡಳಿತ ಅರ್ಥವಾಗಲಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

- Advertisement -


ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು 6 ಲಕ್ಷ ಕೋಟಿಗಾಗಿ ದೇಶದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ, ಅದೂ ಸಾಲದೆ ವಿತ್ತೀಯ ಕೊರತೆ ನೀಗಿಸಲು 5 ಲಕ್ಷ ಕೋಟಿ ಸಾಲ ಮಾಡಲು ಕೇಂದ್ರ ಮುಂದಾಗಿದೆ, ಉದ್ಯಮಿಗಳ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿದ ಜನರ ಮೇಲೆ ತೆರಿಗೆ ಹೇರಲಾತ್ತಿದೆ. ಜನರನ್ನು ದೋಚಿ, ದೇಶವನ್ನು ಅದಾನಿ, ಅಂಬಾನಿಗಳ ಪಾದತಳಕ್ಕೆ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.


ಹುರೂನ್ ಇಂಡಿಯಾ ಸಿದ್ಧಪಡಿಸಿದ ಐಐಎಫ್ ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ -2021 ಗುರುವಾರ ಬಿಡುಗಡೆ ಆಗಿದ್ದು, ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎಂದು ತಿಳಿಸಿದೆ. ಈ ಸಂಬಂಧ ಪತ್ರಿಕೆಯೊಂದರ ವರದಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದೆ.

Join Whatsapp