ಮಗುವಿಗೆ ಹಲ್ಲೆ ನಡೆಸಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ ಮಹಾ ತಾಯಿ!

Prasthutha|

ಹೈದರಾಬಾದ್: ಮಹಿಳೆಯೊಬ್ಬಳು ತನ್ನ 18 ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿ, ಮಗುವಿಗೆ ಥಳಿಸುತ್ತಿರುವ ದೃಶ್ಯವನ್ನು ಮೊಬೈಲ್ ​ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 22 ವರ್ಷದ ಮಹಿಳೆಯನ್ನು ತುಳಸಿ ಎಂದು ಗುರುತಿಸಲಾಗಿದೆ. ತುಳಸಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಪತಿ ಮತ್ತು ತುಳಸಿ ಪದೆ ಪದೇ ಜಗಳವಾಡುತ್ತಿದ್ದರು. ಈ ಕಾರಣಕ್ಕಾಗಿ ಪತಿ ತುಳಸಿ ಅವರನ್ನು ತೊರೆದರು. ಬಳಿಕ ಆಂಧ್ರ ಪ್ರದೇಶದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ತುಳಸಿಯು ತನ್ನ ಮಗುವನ್ನು ಥಳಿಸುವ ವಿಡಿಯೋವನ್ನು ನೋಡಿದ ಸಂಬಂಧಿಕರು ಪತಿಗೆ  ಮಾಹಿತಿ ನೀಡಿದ್ದಾರೆ, ಸದ್ಯ ತುಳಸಿಯನ್ನು ಬಂಧಿಸಲಾಗಿದೆ.  

- Advertisement -