ಸಚಿವರಾಗುವ ಆಸೆಯಿಂದ ಬಿಜೆಪಿ ಸೇರಿದ್ದ ವಿಶ್ವನಾಥ್ ಗೆ ಬಿಗ್ ಶಾಕ್! | ಅವರಿನ್ನೂ ಸಚಿವರಾಗಲು ಅನರ್ಹ

Prasthutha|

ಬೆಂಗಳೂರು : ಸಚಿವರಾಗುವ ಆಸೆಯಿಂದ ಬಿಜೆಪಿ ಸೇರಿದ್ದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಗೆ ಸಚಿವಸ್ಥಾನ ನೀಡುವುದಕ್ಕೆ ಹೈಕೋರ್ಟ್ ಆದೇಶದಲ್ಲಿ ತಡೆಯೊಡ್ಡಲಾಗಿದೆ. 2021ರ ವರೆಗೆ ವಿಶ್ವನಾಥ್ ಗೆ ಸಚಿವರಾಗಲು ಅವಕಾಶವಿಲ್ಲ ಎಂದು ವರದಿಗಳು ತಿಳಿಸಿವೆ.

- Advertisement -

ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಅರ್ಜಿಯೊಂದನ್ನು ವಿಚಾರಿಸಿದ ಹೈಕೋರ್ಟ್, ಸಚಿವರಾಗಲು ವಿಶ್ವನಾಥ್ ಅವರನ್ನು ಅನರ್ಹ ಶಾಸಕ ಎಂಬುದನ್ನು ಮುಖ್ಯಮಂತ್ರಿ ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟಿದೆ. ವಿಶ್ವನಾಥ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಎಲ್ ಸಿ ಆಗಿಲ್ಲ. ಹೀಗಾಗಿ ಅವರಿಗೆ ಸಚಿವ ಸ್ಥಾನ ಹೊಂದಲು ಅವಕಾಶವಿಲ್ಲ ಎನ್ನಲಾಗಿದೆ.

ಎಂಎಲ್ ಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಶಂಕರ್, ಎಂಟಿಬಿ ನಾಗರಾಜ್ ಸಚಿವರಾಗಲು ಅರ್ಹತೆ ಪಡೆದಿದ್ದು, ವಿಶ್ವನಾಥ್ ನಾಮನಿರ್ದೇಶನ ಮೂಲಕ ಆಯ್ಕೆಯಾಗಿರುವುದರಿಂದ ಅವರು ಇನ್ನೂ ಸಚಿವರಾಗುವ ಅರ್ಹತೆಯನ್ನು ಪಡೆದಿಲ್ಲ ಎಂದು ವರದಿಗಳು ತಿಳಿಸಿವೆ.



Join Whatsapp