‘ವಾರ್ & ಪೀಸ್’ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಆಮ್ಟೆ ಅಸಹಜ ಸಾವು | ಆತ್ಮಹತ್ಯೆಯ ಶಂಕೆ

Prasthutha|

ಚಂದ್ರಾಪುರ : ಮಹಾನ್ ಸಾಧಕಿ, ವಿಶ್ವಸಂಸ್ಥೆಯಿಂದ ಗ್ಲೋಬಲ್ ಲೀಡರ್ ಎಂಬ ಬಿರುದು ಪಡೆದ, ಪ್ರತಿಭಾವಂತೆ, ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲಿಸ್ಟ್ ಆದ ಡಾ. ಶೀತಲ್ ಅಮ್ಟೆ ಅಸಹಜ ಸಾವು ಸಂಭವಿಸಿದೆ.

ಖ್ಯಾತ ಸಮಾಜ ಸೇವಕ, ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬಾಬಾ ಅಮ್ಟೆ ಅವರ ಮೊಮ್ಮಗಳೂ ಆಗಿರುವ ಡಾ. ಶೀತಲ್ ಇಂದು ಮುಂಜಾನೆ ವಿಷದ ಚುಚ್ಚು ಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

- Advertisement -

ಡಾ. ಶೀತಲ್ ಆನಂದ್ ವನದಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯೂ ಆಗಿದ್ದರು. ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಇತ್ತೀಚೆಗೆ ಡಾ. ಶೀತಲ್ ಮಾತನಾಡಿದ್ದರು. ಸ್ವತಃ ತಮ್ಮ ಕುಟುಂಬ ಮತ್ತು ಟ್ರಸ್ಟ್ ಮ್ಯಾನೇಜ್ ಮೆಂಟ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.ಎರಡೇ ಗಂಟೆಗಳಲ್ಲಿ ಆ ಟ್ವೀಟ್ ವಾಪಸ್ ಮಾಡಲಾಗಿತ್ತು.

ಇಂದು ಬೆಳಗ್ಗೆ 5:45ಕ್ಕೆ ‘ವಾರ್ ಆಂಡ್ ಪೀಸ್’ ಎಂಬ ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಅದರ ನಂತರ ಕೆಲವೇ ಗಂಟೆಗಳಲ್ಲಿ ಡಾ. ಶೀತಲ್ ಸಾವಿನ ಸುದ್ದಿ ತಿಳಿದು ಬಂದಿದೆ.

ಎಂಬಿಬಿಎಸ್ ನಲ್ಲಿ ಚಿನ್ನದ ಪದಕ ಪಡೆದಿರುವ ಡಾ. ಶೀತಲ್, 2017ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆ ವರ್ಲ್ಡ್ ಎಕಾನಮಿಕ್ ಫೋರಂನಿಂದ ಯಂಗ್ ಗ್ಲೋಬಲ್ ಲೀಡರ್ ಪ್ರಶಸ್ತಿಯನ್ನೂ ಪಡೆದಿದ್ದರು.   

- Advertisement -