ವಿಜ್ಞಾನಿ ಹತ್ಯೆಗೆ ಲೆಕ್ಕಾಚಾರದ ಪ್ರತಿಕ್ರಿಯೆ ನೀಡಲಾಗುವುದು ಎಂದ ಇರಾನ್

Prasthutha|

ಟೆಹ್ರಾನ್: ಇತ್ತೀಚೆಗೆ ನಡೆದ ಇರಾನ್ ನ ಹಿರಿಯ ಅಣು ವಿಜ್ಞಾನಿ ಮುಹ್ಸಿನ್ ಫಖ್ರಿಝದೀಹ್ ಹತ್ಯೆಗೆ ಇಸ್ಲಾಮಿಕ್ ರಿಪಬ್ಲಿಕ್ ಲೆಕ್ಕಾಚಾರದ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ವಿದೇಶಿ ಸಂಬಂಧಗಳ ಕಾರ್ಯತಂತ್ರ ಮಂಡಳಿಯ ಮುಖ್ಯಸ್ಥರು ಹೇಳಿದ್ದಾರೆ.

- Advertisement -

ರವಿವಾರದಂದು ಸಂದೇಶವನ್ನು ಬಿಡುಗಡೆಗೊಳಿಸಿದ  ಕಮಾಲ್ ಖರಾಝಿ, ದೇಶದ ಭದ್ರತೆಯನ್ನು ಖಾತರಿ ಪಡಿಸುವ ಅಂತಿಮ ಉದ್ದೇಶದೊಂದಿಗೆ ತನ್ನ ವೈಜ್ಞಾನಿಕ ಉದ್ದೇಶಗಳನ್ನು ಸಾಧಿಸುವ ಯಾವುದೇ ಅವಕಾಶವನ್ನು ವಿಜ್ಞಾನಿ ಬಿಟ್ಟಿರಲಿಲ್ಲ ಎಂದು ಉಲ್ಲೇಖಿಸುತ್ತಾ ಹತ್ಯೆಯನ್ನು ಖಂಡಿಸಿದರು.

“ಇರಾನ್ ನಿಂದ ಮುಹ್ಸಿನ್ ಫಕ್ರಿಝದೇಹ್ ರನ್ನು ಕಿತ್ತುಕೊಂಡ ಅಪರಾಧಿಗಳಿಗೆ ಇರಾನ್ ಲೆಕ್ಕಾಚಾರದ ಮತ್ತು ನೇರ ಪ್ರತಿಕ್ರಿಯೆಯನ್ನು ನೀಡಲಿದೆ” ಎಂದು ಖರಾಝಿ ಹೇಳಿದರು.



Join Whatsapp