ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಕೊರೋನಾಗೆ ಬಲಿ

Prasthutha News

ಬೀದರ್ ಜಿಲ್ಲೆಯ ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ (65) ಅವರು ಕೊರೋನಾ ಕಾರಣದಿಂದ ನಿಧನರಾಗಿದ್ದಾರೆ.  ನಾರಾಯನ ರಾವ್ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ನಾರಾಯಣ ರಾವ್ ಅವರ ಆರೋಗ್ಯದಲ್ಲಿ  ಆಗಸ್ಟ್ 31 ರಂದು ಏರುಪೇರು ಉಂಟಾಗಿತ್ತು. ಸೆಪ್ಟಂಬರ್ 1 ರಂದು ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.

 ಒಂದೇ ವಾರದಲ್ಲಿ ಮೂರನೇ ಜನಪ್ರತಿನಿಧಿ ಕೊರೋನಾಗೆ ಬಲಿಯಾದಂತಾಗಿದೆ


Prasthutha News