ಭಾರತದಲ್ಲಿ ಅಲ್ಪಸಂಖ್ಯಾತರು ನಿರಂತರ ದಾಳಿಗೊಳಪಡುತ್ತಿದ್ದಾರೆ: ಅಮೆರಿಕ ರಕ್ಷಣಾ ಇಲಾಖೆ ವರದಿ

Prasthutha|

ವಾಷಿಂಗ್ಟನ್: ಭಾರತದಲ್ಲಿ‌ 2021 ನೇ ವರ್ಷದುದ್ದಕ್ಕೂ ಅಲ್ಪಸಂಖ್ಯಾತರ ಮೇಲೆ‌ ನಿರಂತರ ಹತ್ಯೆ, ಹಲ್ಲೆ ಮತ್ತು ದಾಳಿ ನಡೆದಿವೆ ಎಂದು ಅಮೇರಿಕಾದ ರಕ್ಷಣಾ ಇಲಾಖೆಯು ವರದಿ ಮಾಡಿದೆ.

ರಕ್ಷಣಾ ಕಾರ್ಯದರ್ಶಿ ಆಂಥೊನಿ ಬ್ಲಿಂಕೆನ್ , ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಸರಕಾರ ಯಾವುದೇ ಅಭಿಪ್ರಾಯ ವರದಿ ಮಾಡಿಲ್ಲ .ಆದರೆ ಸರ್ಕಾರೇತರ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳ ಆರೋಪಗಳ ಆಧಾರದಲ್ಲಿ ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ’ ಎಂದು ಹೇಳಿದ್ದಾರೆ.

- Advertisement -

ಗೋರಕ್ಷಣೆ ಮತ್ತು ಧಾರ್ಮಿಕ ಆಧಾರದ ಮೇಲೆ ಅಲ್ಪಸಂಖ್ಯಾತರ ಮೇಲಿನ ದಾಳಿ ನಿಜಕ್ಕೂ ಖಂಡನೀಯ ಎಂದು ಹೇಳಿದ ಅವರು ಬಹುತೇಕ ಪ್ರಕರಣದಲ್ಲಿ ಸರ್ಕಾರ ಕೈಗೊಂಡ ತನಿಖೆಯ ಫಲಿತಾಂಶ ಅಥವಾ ಸ್ಪಂದನೆಯ ವರದಿಗಳು ವಿರಳ ಎಂದು ಹೇಳಿದರು.

- Advertisement -