ಹಿಂದಿ, ಇಂಗ್ಲಿಷ್‌ಗಿಂತ ಯಾವ ಭಾಷೆಯೂ ಕಡಿಮೆ ಅಲ್ಲ: ಧರ್ಮೇಂದ್ರ ಪ್ರಧಾನ್

Prasthutha|

ಹೊಸದಿಲ್ಲಿ: ‘ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

- Advertisement -


ಗುಜರಾತ್‌ನಲ್ಲಿ ನಡೆದ ಶಿಕ್ಷಣ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕಳೆದ ಹಲವು ದಿನಗಳಿಂದ ಭಾಷೆಗಳ ವಿಚಾರದಲ್ಲಿ ಹಲವು ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಗುಜರಾತಿ, ತಮಿಳು, ಪಂಜಾಬಿ ,ಅಸ್ಸಾಮಿ, ಬಂಗಾಳಿ, ಮರಾಠಿ ಎಲ್ಲವೂ ರಾಷ್ಟ್ರೀಯ ಭಾಷೆಗಳು. ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ಹೇಳಿದರು.


ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಮುಖ್ಯಸ್ಥರಾದ ಡಾ.ಕೆ.ಕಸ್ತೂರಿರಂಗನ್, ಸ್ಥಳೀಯ ಭಾಷೆಗಳು ಅಥವಾ ಬುಡಕಟ್ಟು ಭಾಷೆಗಳು ಎಂದು ಬಳಸುವ ಬದಲು ‘ಮಾತೃ ಭಾಷೆ’ಗಳು ಎಂಬ ಪದವನ್ನು ಸೂಚಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಈ ಎಲ್ಲಾ ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.

Join Whatsapp