ಸಚಿವ ಸೋಮಣ್ಣ ಸಚಿವರಾಗಿರಲು ನಾಲಾಯಕ್: ಸಿದ್ದರಾಮಯ್ಯ ಆಕ್ರೋಶ

Prasthutha|

ದಾವಣಗೆರೆ: ಸಚಿವ ವಿ. ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿರುವುದು ಅವರ ಸಂಸ್ಕೃತಿ ತೋರಿಸುತ್ತದೆ. ಅಧಿಕಾರದಲ್ಲಿದ್ದವರಿಗೆ ತಾಳ್ಮೆ, ಸಹನೆ ಮುಖ್ಯ. ಜನರ ಸಂಕಷ್ಟ ಆಲಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸೋಮಣ್ಣ ಸಚಿವರಾಗಿರಲು ನಾಲಾಯಕ್ ಎಂದು ಹೇಳಿದರು.
ಮಹಿಳೆ ಏನು ಕೇಳ್ತಾರೆ. ಕಷ್ಟ ಸುಖ ಕೇಳ್ತಾರೆ. ಒತ್ತಾಯ ಮಾಡುತ್ತಾರೆ. ಕಠಿಣ ಶಬ್ಧ ಬಳಸುತ್ತಾರೆ. ಮಹಿಳೆಗೆ ಒಬ್ಬ ಮಂತ್ರಿ ಹೊಡೆಯುವುದು ಅಕ್ಷಮ್ಯ. ಅಧಿಕಾರ ಕೊಟ್ಟಿರುವುದು ಹೊಡೆಯಲಿಕ್ಕಾ. ಬಡವರು, ದಲಿತರು, ಹಿಂದುಳಿದವರು ಮೇಲೆ ದರ್ಪ ತೋರಿಸಲು ಅಧಿಕಾರ ಕೊಡಲಾಗಿದೆಯಾ ಎಂದು ಪ್ರಶ್ನಿಸಿದರು.


ಬಿಜೆಪಿಯವರಿಗೆ ಎಲ್ಲಿದೆ ಸಂಸ್ಕೃತಿ. ಮಾನವೀಯತೆ ಮೂಲಭೂತವಾಗಿ ಇರಬೇಕು. ಇನ್ನೊಬ್ಬರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದ ಅವರುಭ್ರಷ್ಟ ಅಂತಾ ಹೇಳಲು ಅಧಿಕಾರ ಇಲ್ವಾ. ಪೇಸಿಎಂ ಅಭಿಯಾನ ಮಾಡಿದವರ ಮೇಲೆ ನೊಟೀಸ್ ನೀಡಿರುವುದು ಸರಿಯಲ್ಲ ಎಂದು ಹೇಳಿದರು.

Join Whatsapp