ಬೋಳಿಯಾರು ಬಳಿ ಇಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವುದಾಗಿ ವರದಿಯಾಗುವುದು ಸತ್ಯಕ್ಕೆ ದೂರವಾದ ಸಂಗತಿ: ಅಪ್ಸರ್ ಕೊಡ್ಲಿಪೇಟೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಸಮೀಪದ ಬೋಳಿಯಾರು ಬಳಿ ಇಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವುದಾಗಿ ವರದಿಯಾಗುವುದು ಸತ್ಯಕ್ಕೆ ದೂರವಾದ ಸಂಗತಿ ಅಂತ ತಿಳಿದು ಬಂದಿದೆ ಎಂದು ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಇತರ ಒಂದು ಆರ್ಟಿಕಲ್ ಹರಿದಾಡುತ್ತಿದೆ….
ಘಟನೆ ವಿವರ : ಮೋದಿ ಪ್ರಮಾಣ ವಚನ ಸ್ವೀಕಾರಾ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ನೆಪದಲ್ಲಿ ಬೋಳಿಯಾರ್ ಮಸೀದಿಯ ಸಮೀಪ ಮದ್ರಸಕ್ಕೆ ಹೋಗುವ ಮಕ್ಕಳ ಎದುರುಗೆ ಉದ್ದೇಶಪೂರ್ವಕವಾಗಿಯೇ ಜೈಶ್ರೀರಾಂ ಹಾಗೂ ಇನ್ನಿತರ ಪ್ರಚೋದನಕಾರಿ ಘೋಷಣೆ ಕೂಗಿ ಗಲಭೆ ನಡೆಸಲು ಯತ್ನಿಸಿದ ಸಂಧರ್ಭದಲ್ಲಿ ಸಾರ್ವಜನಿಕರು ನೀವು ಇಲ್ಲಿ ಯಾವುದೇ ಸಮಸ್ಯೆ ಉಂಟಾಗುವಂತೆ ಮಾಡ್ಬೇಡಿ ದಯವಿಟ್ಟು ಇಲ್ಲಿಂದ ತೆರಳಿ ಎಂದಾಗ ಸ್ವಲ್ಪ ಮಾತಿಗೆ ಮಾತು ಬೆಳೆದಿದೆ, ಆದರೆ ಸ್ವಲ್ಪ ಹೊತ್ತು ಕಳೆದ ನಂತರ ಪುನಃ ಆಗಮಿಸಿದ ಅದೇ ತಂಡ ಗಲಭೆ ನಡೆಸಲೆಂದೇ ಉದ್ದೇಶಪೂರ್ವಕವಾಗಿಯೇ ಮಸೀದಿಯ ಮುಂಭಾಗ ಡ್ಯಾನ್ಸ್ ಮಾಡುತ್ತಾ ಪ್ರಚೋದನಕಾರಿ ಘೋಷಣೆ ಕೂಗಿದಾಗ ಸ್ಥಳೀಯ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದು ಬಂದ ದಾರಿಯಲ್ಲಿ ಮರಳಿ ಹೋಗುವಂತೆ ಮಾಡಿದ್ದಾರೆ. ಆದರೆ ಇದೀಗ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಯಲ್ಲಿ ದಾಖಲಾಗಿ ಚೂರಿ ಇರಿತವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ಅಲ್ಲಿ ಸೇರಿದ್ದ ಸಾರ್ವಜನಿಕರ ಕೈಯಲ್ಲಿ ಚೂರಿ ಇಲ್ಲದೆ ಇರುವಾಗ ಇವರಿಗೆ ಇರಿದವರು ಯಾರು? ಅಥವಾ ಮಧ್ಯಪಾನ ಮಾಡಿ ಗಲಭೆ ಮಾಡಲೆಂದು ಇವರು ಬರುವಾಗ ತಂದಿದ್ದ ಚೂರಿಯಿಂದ ಇವರ ತಂಡದವರೆ ಚೂರಿಯಿಂದ ಪರಸ್ಪರ ಇರಿದು ಕೊಂಡಿದ್ದಾರೆ ಎಂಬ ಸಂಶಯವು ಸಾರ್ವಜನಿಕರ ಎಡೆಯಲ್ಲಿ ಬರುತ್ತಿದ ಎಂದು ಬೋಳಿಯಾರ್ ನ ನಾಗರಿಕರು ಹೇಳುತ್ತಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ರವರ ಕ್ಷೇತ್ರವಾದ ಉಳ್ಳಾಲ ವ್ಯಾಪ್ತಿಯ ಬೋಳಿಯಾರ್ ನಲ್ಲಿ ಮೋದಿ ಪದಗ್ರಹಣದ ವಿಜಯೋತ್ಸವದ ಸಂಧರ್ಭದಲ್ಲಿ ಮಸೀದಿ ಮುಂದೆ ಪ್ರಚೋದನಕಾರಿ ಘೋಷಣೆ ಗಳನ್ನು ಕೂಗಿ ಮದ್ರಾಸ ಮಕ್ಕಳ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಮೊನ್ನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿಯ ಮುಂಭಾಗದಲ್ಲಿ ಬಿಜೆಪಿ ಪಕ್ಷದ ಮತ್ತು ಸಂಘಪರಿವಾರದ ಗೂಂಡಾಗಳು ವಿಜಯೋತ್ಸವದ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಪ್ರಚೋದನಕಾರಿ ಘೋಷಣೆ ಗಳನ್ನು ಕೂಗಿ ಭಯದ ವಾತಾವರಣ ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ಕೃತ್ಯ ಎಸಗಿದ ಸಂಧರ್ಭದಲ್ಲೇ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ.

ಪೋಲಿಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿ ಶಾಂತಿ ಭಂಗ ಮಾಡುವ ಕಿಡಿಗೇಡಿಗಳನ್ನು ತಹಬದಿಗೆ ತರಲು ತಕ್ಷಣ ಕಾರ್ಯಪ್ರವೃತ್ತರಾಗಲು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp