►ದೇಶಸೇವೆ ಮಾಡುವ ಸೈನಿಕರಿಗೆ ನೆರವು ನೀಡದ ಮೋದಿ ಸರಕಾರ ಯಾವ ಸೀಮೆಯ ದೇಶ ಪ್ರೇಮವನ್ನು ಜನತೆಗೆ ತೋರಿಸಿ ಕೊಡುತ್ತಿದೆ?
ಸೇನಾ ಕಮಾಂಡರ್ ಮಿಲಿಟರಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರಕಾರದ ನೆರವು ಕೇಳುವ ಬದಲು ನೇರವಾಗಿ ಬಾಲಿವುಡ್ ನಟ ಸೋನು ಸೂದ್ ರಿಗೆ ಪತ್ರ ಬರೆದಿದ್ದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಫೂರ್ಣ ವಿಫಲಗೊಂಡಿದ್ದು, ವಿದೇಶಿ ನಾಯಕರೂ ಕೂಡ ಕೇಂದ್ರದ ವೈಫಲ್ಯವನ್ನು ಟೀಕಿಸುತ್ತಿದ್ದಾರೆ. ಈ ನಡುವೆ ಸೋನು ಸೂದ್ ಅವರು ಕೊರೋನಾ ನಿಯಂತ್ರಣಕ್ಕಾಗಿ ಮಾಡುತ್ತಿರುವ ಹೋರಾಟವನ್ನು ಇಡೀ ದೇಶವೇ ಕೊಂಡಾಡುತ್ತಿದೆ.
ಸೋಂಕಿತರಿಗೆ ಆಕ್ಸಿಜನ್, ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ಆಹಾರ ವಿತರಿಸುತ್ತಾ ದೇಶಾದ್ಯಂತ ದೇಶ ಸುತ್ತಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಸೋನು ಸೂದ್, ಕೋವಿಡ್ ನಿಂದ ತತ್ತರಿಸಿರುವ ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಸಿಗದೆ ರೋಗಿಗಳು ಸಾಯುತ್ತಿದ್ದಾಗ 33 ಹಳ್ಳಿಗಳಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ತಮ್ಮ ಫೌಂಡೇಶನ್ ಅಡಿಯಲ್ಲಿ ಸ್ಥಾಪಿಸಿ ಸಾವಿರಾರು ರೋಗಿಗಳನ್ನು ಬದುಕಿಸಿ ಸುದ್ದಿಯಾಗಿದ್ದರು.
ಇದನ್ನೆಲ್ಲಾ ಗಮನಿಸಿದ ಜೈಸಲ್ಮೇರ್ ಮೂಲದ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರೊಬ್ಬರು ಮಿಲಿಟರಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರಕಾರದ ನೆರವು ಕೇಳುವ ಬದಲು ನೇರವಾಗಿ ಸೋನು ಸೂದ್ ರಿಗೆ ಪತ್ರ ಬರೆದಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೋನು ಸೂದ್ ರಿಗೆ ಸೇನಾ ಕಮಾಂಡರ್ ಬರೆದ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆಗಿದ್ದು, ಸೇನೆ ಆರಂಭಿಸುತ್ತಿರುವ ಕೊರೊನಾ ಮಿಲಿಟರಿ ಕೇಂದ್ರದ ಸೌಲಭ್ಯಕ್ಕಾಗಿ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಲು ಅವರು ಕೋರಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ದೇಶಸೇವೆ ಮಾಡುವ ಸೈನಿಕರಿಗೆ ನೆರವು ನೀಡದ ಮೋದಿ ಸರಕಾರ ಯಾವ ಸೀಮೆಯ ದೇಶಪ್ರೇಮವನ್ನು ಜನತೆಗೆ ತೋರಿಸಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.