ಕೊರೊನಾ ಲಸಿಕೆ ಪಡೆಯಲು ಹೆದರಿ ನದಿಗೆ ಹಾರಿದ ಉತ್ತರ ಪ್ರದೇಶದ ಗ್ರಾಮಸ್ಥರು!

Prasthutha|

ಕೋವಿಡ್ ಲಸಿಕೆ ನೀಡಲು ಗ್ರಾಮಕ್ಕೆ ಬಂದ ಆರೋಗ್ಯ ಕಾರ್ಯಕರ್ತರನ್ನು ನೋಡಿ ಹೆದರಿದ ಜನ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬಾರಬಂಕಿಯ ಸಿಸೌರ್ಹಾ ಗ್ರಾಮದಲ್ಲಿ ನಡೆದಿದೆ. ಲಸಿಕೆ ಪಡೆಯಲು ಹಿಂಜರಿಯುವ ಅನೇಕ ಘಟನೆಗಳು ವಿವಿಧ ಭಾಗಗಳಿಂದ ಸಾಕಷ್ಟು ವರದಿಯಾಗುತ್ತಿವೆ.

- Advertisement -


ಕೋವಿಡ್ ಲಸಿಕೆಯನ್ನು ವಿಷಕಾರಿ ಚುಚ್ಚುಮದ್ದು ಎಂದು ತಿಳಿದ ಗ್ರಾಮಸ್ಥರು, ಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತರನ್ನು ನೋಡಿದ ತಕ್ಷಣ ಸರಯೂ ನದಿ ಕಡೆಗೆ ಓಡಿದ್ದಾರೆ. ಇವರನ್ನೇ ಹಿಂಬಾಲಿಸಿದ ಆರೋಗ್ಯ ಕಾರ್ಯಕರ್ತರನ್ನು ಕಂಡು ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ. ನದಿಗೆ ಹಾರಿದ ಗ್ರಾಮಸ್ಥರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ಬಗ್ಗೆ ಮತ್ತು ಲಸಿಕೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹೀಗಾಗಿಯೂ ಸುಮಾರು 1,500 ನಿವಾಸಿಗಳನ್ನು ಹೊಂದಿರುವ ಗ್ರಾಮದಲ್ಲಿ ಕೇವಲ 18 ಮಂದಿ ಲಸಿಕೆ ತೆಗೆದುಕೊಳ್ಳಲು ಒಪ್ಪಿಕೊಂಡ್ಡಿದ್ದಾರೆ ಎಂದು ರಾಜೀವ್ ಕುಮಾರ್ ಶುಕ್ಲಾ ಹೇಳಿದ್ದಾರೆ.


ಗ್ರಾಮಸ್ಥರಿಗೆ ಇದು ಲಸಿಕೆ ಅಲ್ಲ, ವಿಷಕಾರಿ ಚುಚ್ಚುಮದ್ದು ಎಂದು ಕೆಲವರು ವದಂತಿ ಹಬ್ಬಿಸಿದ್ದರಿಂದ ಹಲವರು ನದಿಗೆ ಹಾರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಗ್ರಾಮದಲ್ಲಿ ಲಸಿಕೆ ಬಗ್ಗೆ ಜಾಗೃತಿ ಅಭಿಯಾನ ಕೈಗೊಳ್ಳೂವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಲಸಿಕೆ ತೆಗೆದುಕೊಳ್ಳದೇ ಜನ ಪರಾರಿಯಾಗಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ .

Join Whatsapp