ಉಡುಪಿ ದೈವಸ್ಥಾನದಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪುನರ್ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ!

Prasthutha|

►ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ

ಕರ್ನಾಟಕದಲ್ಲಿ ಕಠಿಣ ಲಾಕ್ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಉಡುಪಿಯ ದೇವಸ್ಥಾನವೊಂದಕ್ಕೆ ಅದು ಅನ್ವಯ ವಾದಂತೆ ಕಾಣುತ್ತಿಲ್ಲ ಉಡುಪಿಯ ಪೆರಂಪಳ್ಳಿ ಯಲ್ಲಿರುವ ಶ್ರೀಕಂಜಿಗಾರ ಹಾಗೂ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ ಲಾಕ್ ಡೌನ್ ನಿರ್ಬಂಧಗಳ ಮಧ್ಯೆಯೇ ನಡೆದಿದೆ.

- Advertisement -

ಧಾರ್ಮಿಕ ಕಾರ್ಯಕ್ರಮಕ್ಕೆ ಬಂದ ಯಾರ ಮುಖದಲ್ಲೂ ಮಾಸ್ಕ್ ಇರಲಿಲ್ಲ ಮಾತ್ರವಲ್ಲ ಸಾಮಾಜಿಕ ಅಂತರ ಕೂಡ ಪಾಲನೆ ಮಾಡಿರಲಿಲ್ಲ. ಈ  ಕಾರ್ಯಕ್ರಮದಲ್ಲಿ ಮಕ್ಕಳು ಹಿರಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಲಾಕ್ ಡೌನ್ ನಿರ್ಬಂಧಗಳನ್ನು ಪಾಲಿಸದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ದೇವಸ್ಥಾನದ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

- Advertisement -