SDPI ವತಿಯಿಂದ ಚೊಕ್ಕಬೆಟ್ಟುವಿನಲ್ಲಿ ಬೃಹತ್ ರಕ್ತದಾನ ಶಿಬಿರ

Prasthutha|

ಸುರತ್ಕಲ್ : SDPI ಸುರತ್ಕಲ್ ಬ್ಲಾಕ್ ಸಮಿತಿ ವತಿಯಿಂದ ಚೊಕ್ಕಬೆಟ್ಟು ಬೂತ್ ಸಮಿತಿ ಹಾಗೂ ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತ ಕೊಟ್ಟು ಬಾಂಧವ್ಯ ಕಟ್ಟು ರಕ್ತದಾನ ಮಾಸಾಚರಣೆ ಎಂಬ ಘೋಷಾವಾಕ್ಯದೊಂದಿಗೆ  ಬೃಹತ್ ರಕ್ತದಾನ ಶಿಬಿರವು ಚೊಕ್ಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೂತ್ ಅಧ್ಯಕ್ಷ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

- Advertisement -

ರಕ್ತದಾನ ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಿ ಜೊತೆಗೆ ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್ ರವರ ನೇತೃತ್ವದಲ್ಲಿ ಸರಕಾರದಿಂದ ಬರುವ ಸವಲತ್ತುಗಳ ಮಾಹಿತಿಯನ್ನು ನೀಡಿ,  ಹೊಸ ಆಧಾರ್ ಕಾರ್ಡ್ ಮತ್ತು ತಿದ್ದುಪಡಿ, ಹೊಸ ವೋಟರ್ ಐಡಿ ಮತ್ತು ತಿದ್ದುಪಡಿ, ಅಭಾ ಕಾರ್ಡ್ ನ್ನು 100 ಕ್ಕೂ ಅಧಿಕ ಫಲಾನುಭವಿಗಳಿಗೆ ಮಾಡಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ. ಕ್ಷೇತ್ರ ಅಧ್ಯಕ್ಷರಾದ ಯಾಸೀನ್ ಅರ್ಕುಲ. ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಕ್ಷೇತ್ರ ಸಮಿತಿ ಸದಸ್ಯರಾದ ಅಝರ್ ಚೊಕ್ಕಬೆಟ್ಟು, ನೌಶಾದ್ ಚೊಕ್ಕಬೆಟ್ಟು, ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್, ಚೊಕ್ಕಬೆಟ್ಟು ಎಂ.ಜೆ.ಎಂ ಪ್ರದಾನ ಕಾರ್ಯದರ್ಶಿ ಶಿಹಾಬುದ್ದೀನ್, ಸಿರಾತೆ ಮುಸ್ತಕೀನ್ ಅಧ್ಯಕ್ಷ ಹಂಝ ಚೊಕ್ಕಬೆಟ್ಟು ಉಪಸ್ಥಿತರಿದ್ದರು.

Join Whatsapp