ಮೊಬೈಲ್ ಟವರ್ ಕಳ್ಳತನ| ಆರೋಪಿ ಬಂಧನ

Prasthutha|

ಪಾಲಕ್ಕಾಡ್: ಮೊಬೈಲ್ ಟವರ್ ಕಳವು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಗೋಕುಲ್ ಎಂಬಾತನನ್ನು ಕೇರಳದ ಕಸಬಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೇಲಂ ಮೂಲದ ಜಿ ಕೃಷ್ಣಕುಮಾರ್‌ನನ್ನು ಈ ಹಿಂದೆ ಬಂಧಿಸಲಾಗಿತ್ತು.

ಪುದುಚೇರಿಯಲ್ಲಿ ನಿಷ್ಕ್ರಿಯಗೊಂಡಿದ್ದ ಮೊಬೈಲ್ ಟವರ್ ಕಾಣೆಯಾಗಿತ್ತು. ಮುಂಬೈ ಮೂಲದ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಒಡೆತನದ ವಿವಿಧ ಸ್ಥಳಗಳಲ್ಲಿನ ಸುಮಾರು 100 ಕೋಟಿ ರೂ. ಅಧಿಕ ಮೌಲ್ಯದ ಬರೋಬ್ಬರಿ 600 ಮೊಬೈಲ್ ಟವರ್‌ಗಳನ್ನು ಕಳವು ಮಾಡಲಾಗಿತ್ತು.

- Advertisement -

ಪಾಲಕ್ಕಾಡ್ ಜಿಲ್ಲೆಯೊಂದರಿಂದಲೇ ಏಳು ಟವರ್‌ಗಳನ್ನು ಲೂಟಿ ಮಾಡಲಾಗಿತ್ತು.
ಏರ್‌ಸೆಲ್ ಕಂಪನಿಗೆ ಸೇರಿದ ಈ ಟವರ್‌ಗಳು 2018 ರಲ್ಲಿ ನಿಷ್ಕ್ರಿಯಗೊಂಡಿತ್ತು. ನಂತರ ಇವುಗಳನ್ನು ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಖರೀದಿಸಿತ್ತು.

Join Whatsapp