ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ

Prasthutha|

ವಿಜಯನಗರ: ಪಾಗಲ್ ಪ್ರೇಮಿಯೊಬ್ಬ ಗೃಹಿಣಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

- Advertisement -


ಪ್ರತಿಭಾ ನಾಗರಾಜ್ (25) ಕೊಲೆಯಾದ ಮಹಿಳೆಯಾಗಿದ್ದು, ಹನುಮಂತ (27) ಕೊಲೆ ಮಾಡಿದ ಆರೋಪಿ. ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಗೆಂದು ಪ್ರತಿಭಾ ಚಿಕ್ಕಮ್ಮನ ಮನೆಗೆ ಬಂದಿದ್ದಳು.
ಈ ವೇಳೆ ಹನುಮಂತು ಆಕೆಯನ್ನು ನೋಡಿದ್ದಾನೆ. ತಾನು ಪ್ರೀತಿಸಿದವಳು ಮತ್ತೊಬ್ಬನೊಂದಿಗೆ ಚೆನ್ನಾಗಿರುವುದನ್ನು ಸಹಿಸಲಾಗದೇ ಪ್ರತಿಭಾಳ ಬಹುತೇಕ ಭಾಗಗಳಿಗೆ ಮನಬಂದಂತೆ ಚಾಕು ಇರಿದಿದ್ದಾನೆ. ಬಳಿಕ ಪ್ರತಿಭಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.


ಈ ಬಗ್ಗೆ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp