ಕಾಟಿಪಳ್ಳದಲ್ಲಿ ಮರ್ಹೂಂ ಶಂಶೀರ್ ಕಾಟಿಪಳ್ಳ, ಶಹೀದ್ ಜಲೀಲ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Prasthutha|

ಸುರತ್ಕಲ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ 3 ನೇ ವಾರ್ಡ್ ಸಮಿತಿ ವತಿಯಿಂದ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮರ್ಹೂಂ ಶಂಶೀರ್ ಕಾಟಿಪಳ್ಳ ಮತ್ತು ಶಹೀದ್ ಜಲೀಲ್ ಕೃಷ್ಣಾಪುರ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ದಿನಾಂಕ ಆದಿತ್ಯವಾರ ನಡೆಯಿತು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಜಾಸ್ಮಿನ್ ಮಹಲ್ ಕಾಟಿಪಳ್ಳದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI 3ನೇ ವಾರ್ಡ್ ಕಾಟಿಪಳ್ಳ ಇದರ ಅಧ್ಯಕ್ಷ ಜನಾಬ್ ಫಯಾಜ್ ಸುಲ್ತಾನ್ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ನಾಸೀರ್ ಮದನಿ ನೆರವೇರಿಸಿದರು. ರಕ್ತದಾನ ಶಬಿರದಲ್ಲಿ 113 ಮಂದಿ ರಕ್ತದಾನ ಮಾಡಿದರು.
ಕಾರ್ಯಕ್ರಮಕ್ಕೆ SDPI ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್, SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅರ್ಕುಲ ಭೇಟಿ ನೀಡಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಸ್ ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಕಾಟಿಪಳ್ಳ ಇನ್ಫೆಂಟ್ ಮೇರಿ ಚರ್ಚ್ನ ಧರ್ಮಗುರು ಡಿಕೂನ್ ಬ್ರದರ್ ವಿನ್ಸೆಂಟ್ ಕೋಲಾಸೋ, ಉಲಮಾ ನೇತಾರ ಹಾಮಿದ್ ತಂಙಲ್ ಅಲ್ ಬುಖಾರಿ, ವೆನ್ಲಾಕ್ ಆಸ್ಪತ್ರೆಯ ಡಾ. ವಿಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಮೀರ್ ಕಾಟಿಪಳ್ಳ ನಿರೂಪಿಸಿದರು. ತೌಕೀರ್ ಕಾಟಿಪಳ್ಳ ವಂದನಾರ್ಪಣೆ ಮಾಡಿದರು.

- Advertisement -

- Advertisement -

Join Whatsapp