ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬೇರ್ಪಟ್ಟ ಬೋಗಿಗಳು| ತಪ್ಪಿದ ಭಾರೀ ಅನಾಹುತ

Prasthutha|

ಕಾಸರಗೋಡು | ಮಂಗಳೂರಿನಿಂದ ಪಾಲಕ್ಕಾಡ್‌ ಕಡೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳು ಬೇರ್ಪಟ್ಟಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

- Advertisement -

ಕಾಸರಗೋಡು ಜಿಲ್ಲೆಯ ತ್ರಿಕರಿಪುರದ ಚಂದೇರಾದಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳು ದಿಢೀರನೆ ಬೇರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಚಂದೇರಾ ರೈಲ್ವೇ ನಿಲ್ದಾಣ ಸಮೀಪಿಸುತ್ತಿದ್ದಂತೆ ಏಳನೇ ಬೋಗಿಯು ಸಂಪರ್ಕ ಕಳೆದುಕೊಂಡಿದೆ. ರೈಲನ್ನು ಹಿಂದಕ್ಕೆ ಚಲಾಯಿಸುವ ಮೂಲಕ ಒಂದೂವರೆ ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಬೋಗಿಗಳನ್ನು ಸರಿಪಡಿಸಲಾಯಿತು.

Join Whatsapp