ಸಂಘಪರಿವಾರದಿಂದ ಹತ್ಯೆಯಾದ ಮಸೂದ್ ಕುಟುಂಬಸ್ಥರಿಂದ ಡಿಸಿ, ಎಸ್ ಪಿ ಭೇಟಿ: ನ್ಯಾಯಕ್ಕಾಗಿ ಆಗ್ರಹ

Prasthutha|

ಮಂಗಳೂರು: ಸುಳ್ಯ ತಾಲೂಕಿನ ಕಳಂಜದಲ್ಲಿ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಗೊಳಗಾದ ಶಹೀದ್ ಮಸೂದ್ ಕುಟುಂಬಸ್ಥರು ಇಂದು ದ.ಕ ಜಿಲ್ಲಾಧಿಕಾರಿಯನ್ನು ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿ,ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

- Advertisement -


ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ಧನ ಕೊಡಲು ಶಿಫಾರಸು ಮಾಡುವಂತೆಯೂ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.


ನಿಯೋಗದಲ್ಲಿ ಮಸೂದ್‌ನ ತಾಯಿ ಸಾರಮ್ಮ ,ಸಹೋದರ ಇರ್ಶಾದ್ , ಮಿರ್ಶಾದ್, ಸಹೋದರಿ ಶಿಫಾನ, ಮಾವಂದಿರಾದ ಶೌಕತ್ ಕಳಂಜ,ಹೈದರ್ ಕಳಂಜ ಹಾಗೂ ಸ್ಥಳೀಯರಾದ ಫೈಝಲ್ ಬೆಳ್ಳಾರೆ, ಹಮೀದ್ ಮರಕ್ಕಡ ಉಪಸ್ಥಿತರಿದ್ದರು



Join Whatsapp