ನ್ಯಾ. ಸಂದೇಶ್ ಅವರ ಹೆಚ್ಚುವರಿ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈ ಕೋರ್ಟ್

Prasthutha|

ಬೆಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆ ವೇಳೆ ತಮಗೆ ‘ಬೆದರಿಕೆ’ ಬಂದಿದೆ ಎಂದು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚುವರಿ ಭದ್ರತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

- Advertisement -

ತುಮಕೂರು ನಿವಾಸಿ ರಮೇಶ್ ನಾಯಕ್ ಎಲ್.ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಸಂದೇಶ್ ಅವರಿಗೆ ಪ್ರಸ್ತುತ ಒದಗಿಸಲಾದ ಭದ್ರತೆಯ ವ್ಯಾಪ್ತಿ ಅಸಮರ್ಪಕವಾಗಿದೆ ಎಂದು ಅರ್ಜಿದಾರರು ಹೇಳದ ಕಾರಣ ಹೆಚ್ಚುವರಿ ಭದ್ರತೆಯನ್ನು (ವೈ, ವೈ +, ಝಡ್, ಝಡ್ + ನಂತಹ) ಒದಗಿಸುವ ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಪೀಠ ಹೇಳಿದೆ.

- Advertisement -

ನ್ಯಾಯಮೂರ್ತಿ ಸಂದೇಶ್ ಅವರಿಗೆ ಯಾವುದೇ ಬೆದರಿಕೆ ಸಂಬಂಧಿಸಿದಂತೆ ಅರ್ಜಿದಾರರು ಜುಲೈ 5, 2022 ರಂದು ನ್ಯಾಯಾಲಯಕ್ಕೆ ಕಳುಹಿಸಿದ ಇಮೇಲ್ ನಲ್ಲಿ ಯಾವುದೇ ವಾಸ್ತವಿಕ ಅಡಿಪಾಯವಿಲ್ಲ. ಅವರಿಗೆ ಒದಗಿಸಲಾದ ಭದ್ರತೆಯು ಅಸಮರ್ಪಕವಾಗಿದೆ ಎಂದು ಸಹ ಹೇಳಲಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಸಂದೇಶ್ ಅವರಿಗೆ ‘ವರ್ಗಾವಣೆಯ ಬೆದರಿಕೆ’ಯ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಮಾಡಿದ ಮನವಿಯ ಮೇರೆಗೆ ನ್ಯಾಯಪೀಠವು, ಭಾರತದ ಸಂವಿಧಾನದ ಅನುಚ್ಛೇದ 222 ರಲ್ಲಿ ಸೂಚಿಸಿರುವ ರೀತಿಯಲ್ಲಿ ನ್ಯಾಯಾಧೀಶರನ್ನು ಒಂದು ಹೈಕೋರ್ಟ್ ನಿಂದ ಇನ್ನೊಂದಕ್ಕೆ ವರ್ಗಾಯಿಸುವುದನ್ನು ನಿಯಂತ್ರಿಸಲಾಗುತ್ತದೆ ಎಂದು ಗಮನಸೆಳೆದಿತು.

ನ್ಯಾಯಮೂರ್ತಿ ಸಂದೇಶ್ ಅವರ ಹೇಳಿಕೆಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಮತ್ತು ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರು ಸಲ್ಲಿಸಿದ ವಿಶೇಷ ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆಗುತ್ತಿದೆ.

ಆದ್ದರಿಂದ ಸುಪ್ರೀಂ ಕೋರ್ಟ್ ಮುಂದೆ ಅಧೀನವಾಗಿರುವ ವಿಷಯದ ಬಗ್ಗೆ ವ್ಯವಹರಿಸಲು, ಹೈಕೋರ್ಟ್ ಗೆ ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸುವಾಗ ಹೇಳಿ

Join Whatsapp