ಡಿಕೆಶಿ ಜೊತೆ ಫೈಟ್: ಶಾಸಕ ಜಮೀರ್ ಗೆ ವಾರ್ನಿಂಗ್ ನೋಟೀಸ್ ಕೊಟ್ಟ ಹೈಕಮಾಂಡ್

Prasthutha|

ಬೆಂಗಳೂರು:  ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್ ನೊಳಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ನಡೆಯುತ್ತಿರುವ ಈ ಚರ್ಚೆಯಲ್ಲಿ ಶಾಸಕ ಜಮೀರ್ ಅಹ್ಮದ್ ಎಂಟ್ರಿ ಕೊಟ್ಟಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಜಮೀರ್ ಅಹಮದ್ ಖಾನ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಆಪ್ತ ಶಾಸಕ ಜಮೀರ್ ಗೆ ಹೈಕಮಾಂಡ್ ನೋಟಿಸ್ ನೀಡಿದೆ.

- Advertisement -

ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ  ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ ಆರೋಪದ ಮೇಲೆಗೆ  ಎಐಸಿಸಿ ನೋಟಿಸ್ ನೀಡಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲ ಎಚ್ಚರಿಕೆ ಪತ್ರ ನೀಡಿದ್ದು, ಪಕ್ಷದ ಶಿಸ್ತು, ಲಕ್ಷಣ ರೇಖೆ ದಾಟದಂತೆ ಸೂಚಿಸಲಾಗಿದೆ , ಇತ್ತೀಚೆಗಿನ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ನೋಟಿಸ್ ನೀಡಲಾಗಿದೆ.

ಇನ್ನು ನೋಟಿಸ್ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳ ಪ್ರತಿಕ್ರಿಯಿಸಿದ ಜಮೀರ್, ನನಗೆ ಎಐಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ. ನೋಟಿಸ್ ಬರುವಂತಹದ್ದು ನಾನೇನು ಮಾಡಿದೀನಿ. ನಾನು ಯಾವ ಜಾತಿ ಬಗ್ಗೆ ಮಾತನಾಡಿಲ್ಲ. ಒಂದು ಜಾತಿಯ ಮತ ಪಡೆದು ಸಿಎಂ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

- Advertisement -

ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂಬ ಡಿ.ಕೆ.ಶಿವಕುಮಾರ್ ಎಚ್ಚರಿಕೆಗೆ ಜಮೀರ್ ಸಡ್ಡು ಹೊಡೆದು ನನಗೆ ವ್ಯಕ್ತಿ ಪೂಜೆಯೂ ಮುಖ್ಯ, ಪಕ್ಷ ಪೂಜೆಯೂ ಮುಖ್ಯ ಎಂದಿದ್ದರು. ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಚಾಲನೆ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್. ಇದಾದ ಬಳಿಕ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದು ತಿರುಗೇಟು ನೀಡಿದ್ದರು.

ನಮ್ಮ ಲೆವೆಲ್ ಜನ ಹೇಳಬೇಕು ಎಂದು ಡಿ ಕೆ ಶಿವಕುಮಾರ ಹೇಳಿದ್ದು, ಅದಕ್ಕೆ ಟಾಂಗ್ ನೀಡಿದ ಜಮೀರ್ ಎಐಸಿಸಿಯಿಂದಲೂ ನಂಗೆ ಸೂಚನೆ ಬಂದಿಲ್ಲ. ನಂಗ್ಯಾಕೆ ನೋಟಿಸ್ ನೀಡ್ತಾರೆ. ನಾನೇನು ತಪ್ಪು ಮಾತನಾಡಿದ್ದೇನೆ ಎಂದು ಮರು ಪ್ರಶ್ನಿಸಿದ್ದಾರೆ.

Join Whatsapp