ಡೀಸೆಲ್ ಕಾರು ಉತ್ಪಾದನೆ ಸ್ಥಗಿತ: ಮಾರುತಿ ಸುಜುಕಿ ಮಹತ್ವದ ಘೋಷಣೆ

Prasthutha|

ನವದೆಹಲಿ: ಡೀಸೆಲ್ ಇಂಜಿನ್ ಕಾರುಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ ಮಾರುತಿ ಸುಝುಕಿ, ಡೀಸೆಲ್ ಇಂಜಿನ್ ಕಾರುಗಳ ಉತ್ಪಾದನೆಯನ್ನು ಮತ್ತೆ ಪ್ರಾರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

- Advertisement -

2020ರ ಏಪ್ರಿಲ್’ನಿಂದ ಹಂತಹಂತವಾಗಿ ಎಲ್ಲಾ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಮಾರುತಿ ಸುಝುಕಿ 2019ರಲ್ಲೇ ಘೋಷಿಸಿತ್ತು. ಆದರೆ ಇದೀಗ ಮುಂದಿನ ದಿನಗಳಲ್ಲಿ ಇಂಜಿನ್ ಕಾರುಗಳ ಉತ್ಪಾದನೆಯನ್ನು ಪುನರ್ ಆರಂಭಿಸುವ ಸಾಧ್ಯತೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

2023ರ ವೇಳೆಗೆ ಮುಂದಿನ ಹಂತದ ಮಾಲಿನ್ಯ ನಿಯಂತ್ರಣ ನಿಯಮಗಳು ಜಾರಿಗೆ ಬರಲಿವೆ. BS6 ನಿಯಮಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಡೀಸೆಲ್ ಇಂಜಿನ್’ಗಳನ್ನು ಬಳಸಿದರೆ ಸಣ್ಣ ಕಾರುಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಡೀಸೆಲ್ ಕಾರುಗಳ ಮಾರಾಟದ ಪ್ರಮಾಣವನ್ನು ತಗ್ಗಿಸಲು, ಚಾಲ್ತಿಯಲ್ಲಿರುವ ಕಂಪನಿಯ ಡೀಸೆಲ್ ಕಾರುಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುವುದು, ಇದರಿಂದಾಗಿ ಅವುಗಳ ಮಾರಾಟದ ಪ್ರಮಾಣ ಕ್ರಮೇಣ ಮತ್ತಷ್ಟು ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಮತ್ತೆ ಡೀಸೆಲ್ ಕಾರು ತಯಾರಿಸಲು ನಾವು ಮುಂದಾಗುವುದಿಲ್ಲ ಎಂದು ಸುಜುಕಿ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಸಿವಿ ರಾಮನ್ ತಿಳಿಸಿದ್ದಾರೆ.

- Advertisement -

ದೇಶದಲ್ಲಿ ಇಂಧನ ದರದಲ್ಲಿ ಉಂಟಾಗುತ್ತಿರುವ ಏರಿಕೆಯ ಪ್ರಮಾಣವನ್ನು ಗಮನದಲ್ಲಿರಿಸಿ ಪೆಟ್ರೋಲ್ ಇಂಜಿನ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವತ್ತ ಕಂಪನಿ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸೆಲೆರಿಯೋ ಫೇಸ್ ಲಿಫ್ಟೆಡ್ ಮಾಡೆಲ್, ಲೀಟರ್’ಗೆ 26.68 ಕಿಮೀ ಮೈಲೆಜ್ ನೀಡುವುದಾಗಿ ಕಂಪನಿ ಘೋಷಿಸಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಎಂಬ ಖ್ಯಾತಿ ಗಳಿಸಿದೆ.

Join Whatsapp