ಏರ್’ಟೆಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ: ಎಲ್ಲಾ ಪ್ಲಾನ್’ಗಳ ದರದಲ್ಲೂ ಏರಿಕೆ !

Prasthutha|

ನವದೆಹಲಿ; ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆ ಏರ್’ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ಕರೆ ಮತ್ತು ಇಂಟರ್’ನೆಟ್ ರೀಚಾರ್ಜ್ ದರಗಳನ್ನು ಶೇ.20ರಿಂದ 25ರಷ್ಟು ಹೆಚ್ಚಿಸಿದ್ದು ನೂತನ ದರ ಯೋಜನೆ ನವೆಂಬರ್ 26ರಿಂದ ಜಾರಿಗೆ ಬರಲಿದೆ.

- Advertisement -

ಏರ್’ಟೆಲ್ ಆರಂಭಿಕ ಕರೆಗಳ ಟಾರಿಫ್ ಯೋಜನೆಯ ಹೊಸ ದರವು 99 ರೂ.ಆಗಲಿದೆ. ಕೆಲ ತಿಂಗಳ ಹಿಂದೆ 45 ರೂ. ರಷ್ಟಿದ್ದ ಮೂಲ ಯೋಜನೆಯ ದರವನ್ನು ಇತ್ತೀಚೆಗಷ್ಟೇ 75 ರೂ.ಗೆ ಏರಿಸಲಾಗಿತ್ತು. ಇದೀಗ ಮತ್ತೆ ₹99ಕ್ಕೆ ಏರಿಕೆ ಕಂಡಿದೆ. ಯೋಜನೆಯು 28 ದಿನಗಳ ವ್ಯಾಲಿಡಿಟಿ, 200 MB ಡೇಟಾ, 1p/ಸೆಕೆಂಡ್ ಕಾಲ್ ರೇಟ್ ಒಳಗೊಂಡಿದೆ.

ಡೇಟಾ ಟಾಪ್-ಅಪ್ ಯೋಜನೆಗಳ ದರ ಕೂಡ ಹೆಚ್ಚಾಗಿದೆ. ಈಗಿರುವ 48 ರೂ.ದರವನ್ನು 58 ರೂ.ಗೆ ಹೆಚ್ಚಿಸಲಾಗಿದ್ದು, 98 ರೂ. ಮತ್ತು 251 ರೂ.ರೀಚಾರ್ಜ್ ಯೋಜನೆ ಕ್ರಮವಾಗಿ 118 ರೂ.ಮತ್ತು 301ರೂ.ಗೆ ಏರಿಕೆಯಾಗಿದೆ.

- Advertisement -

56 ದಿನಗಳ ವ್ಯಾಲಿಡಿಟಿಯ ಈಗಿರುವ 399 ರೂ.ಪ್ಲಾನ್ 479 ರೂ.ಆಗಲಿದ್ದು, 449 ರೂ.ಯೋಜನೆ 549 ರೂ.ಗೆ ಹೆಚ್ಚಿಸಲಾಗಿದೆ. 84 ದಿನಗಳ ವ್ಯಾಲಿಡಿಟಿಯ ಯೋಜನೆಗೆ ಕನಿಷ್ಠ 455 ರೂ. ಪಾವತಿಸಬೇಕಾಗುತ್ತದೆ. 149 ದರವೀಗ 179 ರೂ.ಆಗಲಿದೆ. 219 ದರ 265 ರೂ. ಆಗಲಿದೆ. 249 ಮತ್ತು 298 ರೂ.ಪ್ರಿಪೇಯ್ಡ್ ಯೋಜನೆಗಳು ಇನ್ನು ಕ್ರಮವಾಗಿ 299 ರೂ.ಮತ್ತು 359 ರೂ.ಗೆ ಸಿಗಲಿದೆ. ಏರ್‌’ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂ.ಪಾವತಿಸಬೇಕಾಗುತ್ತದೆ. ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕಂಪೆನಿ, ಭಾರತದಲ್ಲಿ 5ಜಿ ಅನ್ನು ಹೊರತರಲು ಏರ್‌’ಟೆಲ್‌ ಬಲ ನೀಡುತ್ತದೆ. ಆದ್ದರಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ.

Join Whatsapp