ಬಿಜೆಪಿಗೆ ಸಹಾಯ: ಸಂಸದೆ ಪ್ರಣೀತ್ ಕೌರ್ ಕಾಂಗ್ರೆಸ್’ನಿಂದ ಅಮಾನತು

Prasthutha|

ನವದೆಹಲಿ: ಬಿಜೆಪಿಗೆ ಸಹಾಯ ಮಾಡಿದ ಆರೋಪದಲ್ಲಿ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ, ಸಂಸದೆ ಪ್ರಣೀತ್ ಕೌರ್ ಅವರನ್ನು ಕಾಂಗ್ರೆಸ್’ನಿಂದ ಅಮಾನತುಗೊಳಿಸಲಾಗಿದೆ.

- Advertisement -


ಸಂಸದೆ ಪ್ರಣೀತ್ ಕೌರ್ ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.


ಪ್ರಣೀತ್ ಕೌರ್ ಅವರು ಬಿಜೆಪಿಗೆ ಸಹಾಯ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ದ ಪಕ್ಷದ ಶಿಸ್ತು ಕ್ರಮ ಸಮಿತಿಯು ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ತಿಳಿಸಿದೆ.

Join Whatsapp