ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಇನಾಯತ್ ಅಲಿ

Prasthutha|

► ಉದ್ಯೋಗ ಸೃಷ್ಟಿಗಾಗಿ ಮಂಗಳೂರು ಉತ್ತರದಲ್ಲಿ ವಿಶೇಷ ಯೋಜನೆ

- Advertisement -

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಗುರುವಾರದಂದು ಗುರುಪುರ ವಲಯದ ಅಡ್ಯಾರುಪದವು, ವಾಮಂಜೂರು, ಗಂಜಿಮಠ, ಆದ್ಯಪಾಡಿ, ಮುಚ್ಚೂರು, ಎಡಪದವು, ಮಿಜಾರ್ ಹಾಗೂ ಕುಪ್ಪೆಪದವಿನಲ್ಲಿ ಬಹಿರಂಗ ಸಭೆ ನಡೆಸಿ ಚುಬಾವಣಾ ಪ್ರಚಾರ ನಡೆಸಿದರು.

ವಿವಿಧ ಸ್ಥಳಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಮಾರುಕಟ್ಟೆ ಹಾಗೂ ಅಂಗಡಿಗಳಿಗೂ ಭೇಟಿ ನೀಡಿ ಮತಯಾಚಿಸಿದರು.

- Advertisement -

‘ಬಿಜೆಪಿ ಸರಕಾರದ ಜನವಿರೋಧಿ ನಡೆಯಿಂದ ಇಂದು ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ಶ್ರಮಿಸಲಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ವಿಶೇಷ ಯೋಜನೆಯನ್ನು ಹಾಕಿದ್ದೇವೆ. ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಇನಾಯತ್ ಅಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.