ಕೋಮು ಪ್ರಚೋದನಕಾರಿ ಹೇಳಿಕೆ| ಸಂಸದ ರಾಜ್’ಮೋಹನ್ ಉನ್ನಿತ್ತಾನ್ ವಿರುದ್ಧ ದೂರು ದಾಖಲು

Prasthutha|

ಕಾಸರಗೋಡು: ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಸರಗೋಡು ಸಂಸದ ರಾಜ್’ಮೋಹನ್ ಉನ್ನಿತ್ತಾನ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.

- Advertisement -

ಕೋಮು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜ್’ಮೋಹನ್ ಉನ್ನಿತ್ತಾನ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕೇರಳ ಬಿಜೆಪಿಯ ಮಾಜಿ ವಕ್ತಾರ ಸಂದೀಪ್ ವಾರಿಯರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

“ನಾವೆಲ್ಲರೂ ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಡುವವರಾಗಿದ್ದೇವೆ. ಚುನಾವಣೆ ಬರುವಾಗ ಮುಸ್ಲಿಮರು ಪರಸ್ಪರ ಹೋರಾಟ ಮಾಡಿ ಅವರ ಗೆಲುವಿಗೆ ಸಹಕರಿಸಬಾರದು” ಎಂದು ರಾಜ್’ಮೋಹನ್ ಉನ್ನಿತ್ತಾನ್ ಚುನಾವಣಾ ಪ್ರಚಾರದ ವೇಳೆ ಮತದಾರರ ಬಳಿ ಹೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

- Advertisement -

ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನ ಕೋಮು ಪ್ರಚೋದನೆಯು ಉನ್ನಿತ್ತಾನ್ ಅವರ ಮಾತಿನಲ್ಲಿ ಎದ್ದುಕಾಣುತ್ತಿದೆ ಎಂದು ಸಂದೀಪ್ ವಾರಿಯರ್ ಹೇಳಿದ್ದಾರೆ.