ಸೌದಿ ಅರೇಬಿಯಾದಲ್ಲಿ ಬೆಂಕಿ ಅವಘಡ| ನಾಲ್ವರು ಕೇರಳಿಗರು ಸೇರಿದಂತೆ ಆರು ಮಂದಿ ಮೃತ್ಯು

Prasthutha|

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಸತಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಕೇರಳಿಗರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.

- Advertisement -

ಮೃತಪಟ್ಟವರು ಖಾಲಿದಿಯಾದಲ್ಲಿ ಪೆಟ್ರೋಲ್ ಪಂಪ್‌ನ ನೌಕರರಾಗಿದ್ದಾರೆ. ವರದಿಯ ಪ್ರಕಾರ, ನಾಲ್ವರು ಕೇರಳಿಗರು, ತಮಿಳುನಾಡು ಮೂಲದ ಒಬ್ಬರು ಮತ್ತು ಗುಜರಾತ್ ಮೂಲದ ಒಬ್ಬರು ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಇಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದು, ಇನ್ನಿಬ್ಬರು ಕೇರಳಿಗರ ವಿವರ ಲಭ್ಯವಾಗಿಲ್ಲ. ಮೃತಪಟ್ಟವರೆಲ್ಲರೂ ಪೆಟ್ರೋಲ್ ಬಂಕ್ ನಲ್ಲಿ ಹೊಸದಾಗಿ ಉದ್ಯೋಗಕ್ಕೆ ಬಂದವರಾಗಿದ್ದಾರೆ. ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಮೃತದೇಹಗಳನ್ನು ರಿಯಾದ್‌ನಲ್ಲಿರುವ ಅಲ್ ಶುಮೈಸಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.