ಮಂಗಳೂರು: ‘ಹುಲಿ ವೇಷ’ದಲ್ಲಿ WE STAND WITH ISRAEL ಬರಹ

Prasthutha|

ಸೌಹಾರ್ದತೆ ಕೆಡಿಸುವ ಸಂದೇಶ ಎಂದ ನೆಟ್ಟಿಗರು

- Advertisement -

ಮಂಗಳೂರು: ‘ಹುಲಿ ವೇಷ’ದಲ್ಲಿ WE STAND WITH ISRAEL ಬರಹ ಬರೆಯುವುದರ ಮೂಲಕ ಸೌಹರ್ದತೆ ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವರಾತ್ರಿಯ ವೇಳೆ ಮಾರ್ನಮಿ ವೇಷ ಧರಿಸುವುದು ಕರಾವಳಿಯ ಆಚರಣೆಗಳಲ್ಲಿ ಒಂದು. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಹುಲಿ ವೇಷ ತಂಡಗಳು ನವರಾತ್ರಿಯ ಸಮಯದಲ್ಲಿ ಸಕ್ರಿಯವಾಗುತ್ತವೆ. ಈ ಮಾರ್ನಮಿ ವೇಷ ಕರಾವಳಿಯಲ್ಲಿ ಸೌಹಾರ್ದ ಪರಂಪರೆಯನ್ನು ಹೊಂದಿದ್ದು, ಎಲ್ಲಾ ಜಾತಿ, ಧರ್ಮದವರ ಮನೆಗಳಲ್ಲಿ ಹುಲಿ ಕುಣಿತದ ವೇಷಭೂಷಣ ತೊಟ್ಟು ಪ್ರದರ್ಶನ ನೀಡಲಾಗುತ್ತದೆ.

- Advertisement -

ಇಂದು ಉಳ್ಳಾಲ ತಾಲೂಕಿನ ನರಿಂಗಾನಕ್ಕೆ ಬಂದ ಹುಲಿ ವೇಷದ ತಂಡದವರು WE STAND WITH ISRAEL ಎಂಬ ಬರಹವನ್ನು ಬರೆದಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಇದು ವಿವಾದ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹುಲಿ ವೇಷಧಾರಿಗಳು ಬಳಿಕ ಬರಹವನ್ನು ಅಳಿಸಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp